ಮಧ್ಯಪ್ರದೇಶದಲ್ಲಿ ಸೆಪ್ಟೆಂಬರ್ 21 ರಿಂದ 9ನೇ ತರಗತಿಯಿಂದ 12ನೇ ತರಗತಿ ಶಾಲೆಗಳು ಬಾಗಿಲು ತೆರೆಯಲಿವೆ. ಕೇಂದ್ರದ ಮಾರ್ಗಸೂಚಿಯನ್ನು ಪಾಲಿಸುವಂತೆ ರಾಜ್ಯ ಶಿಕ್ಷಣ ಇಲಾಖೆ ಶಾಲೆಗಳಿಗೆ ನಿರ್ದೇಶನ ನೀಡಿದೆ. ರಾಜಧಾನಿಯ ಕೆಲ ಶಾಲೆಗಳು ತಯಾರಿ ಶುರು ಮಾಡಿವೆ.
ಕೊರೊನಾದಿಂದ ಮಕ್ಕಳನ್ನು ರಕ್ಷಿಸಲು ಶಾಲೆಗಳನ್ನು ಸ್ವಚ್ಛಗೊಳಿಸಲಾಗ್ತಿದೆ. ಸ್ಯಾನಿಟೈಜರ್ ಮಾಡಲಾಗ್ತಿದೆ. ಶಾಲೆಗಳನ್ನು ಎರಡು ಹಂತದಲ್ಲಿ ತೆರೆಯಲಾಗುವುದು. ಎರಡು ಗೇಟ್ ವ್ಯವಸ್ಥೆಯಿರಲಿದೆ. ಕೆಲ ಶಾಲೆಗಳಲ್ಲಿ ಪೂರಕ ಪರೀಕ್ಷೆ ನಡೆಯುತ್ತಿರುವ ಕಾರಣ ತಯಾರಿ ಶುರುವಾಗಿಲ್ಲ. ಪರೀಕ್ಷೆ ನಂತ್ರ ಶಾಲೆ ತೆರೆಯಲು ತಯಾರಿ ನಡೆಸುವುದಾಗಿ ಶಿಕ್ಷಕರು ಹೇಳಿದ್ದಾರೆ. ಸಿಬಿಎಸ್ಸಿ ಶಾಲೆಗಳಲ್ಲಿ ಸೆಪ್ಟೆಂಬರ್ 29ರವರೆಗೆ 10ನೇ ತರಗತಿ ಮತ್ತು 12ನೇ ತರಗತಿ ಪೂರಕ ಪರೀಕ್ಷೆ ನಡೆಯಲಿದೆ.
ಪ್ರತಿ ಮೂರು ಗಂಟೆಗೆ ಶಾಲೆಯನ್ನು ಸ್ಯಾನಿಟೈಜರ್ ಮಾಡಲಾಗುವುದು. 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 8.30ರಿಂದ 11.30ರವರೆಗೆ ಪಾಠ ನಡೆಯಲಿದೆ. 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ 12.30 ರಿಂದ 3.30 ರವರೆಗೆ ಪಾಠ ನಡೆಯಲಿದೆ. ಶಾಲೆಯಲ್ಲಿ ಮಾಸ್ಕ್, ಸಾಮಾಜಿಕ ಅಂತರಕ್ಕೆ ಹೆಚ್ಚಿನ ಮಹತ್ವ ನೀಡಲಾಗುವುದು. ಮಕ್ಕಳ ಸಂಖ್ಯೆ ಹೆಚ್ಚಿದ್ದಲ್ಲಿ ಶಿಪ್ಟ್ ರೀತಿಯಲ್ಲಿ ಪಾಠ ಮಾಡುವುದಾಗಿ ಶಿಕ್ಷಣ ಇಲಾಖೆ ಹೇಳಿದೆ.