alex Certify ಕೊರೊನಾ ಪಾಸಿಟಿವ್ ಬರ್ತಿದ್ದಂತೆ ಕ್ವಾರಂಟೈನ್ ಆದ ಉಮಾ ಭಾರತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಪಾಸಿಟಿವ್ ಬರ್ತಿದ್ದಂತೆ ಕ್ವಾರಂಟೈನ್ ಆದ ಉಮಾ ಭಾರತಿ

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿಯ ಹಿರಿಯ ನಾಯಕಿ ಉಮಾ ಭಾರತಿಗೆ ಕೊರೊನಾ ಕಾಣಿಸಿಕೊಂಡಿದೆ. ಕೊರೊನಾ ಸೋಂಕಿಗೆ ಒಳಗಾದ ಬಗ್ಗೆ ಉಮಾ ಭಾರತಿ ಸ್ವತಃ ಟ್ವೀಟ್ ಮಾಡಿದ್ದಾರೆ. ಕೊರೊನಾ ಬಗ್ಗೆ ಮಾಹಿತಿ ಪಡೆದ ನಂತರ, ಉಮಾ ಭಾರತಿ ಋಷಿಕೇಶ ಮತ್ತು ಹರಿದ್ವಾರ್ ನಡುವೆ ಇರುವ ವಂದೇ ಮಾತರಂ ಕುಂಜ್ ನಲ್ಲಿ ಕ್ವಾರಂಟೈನ್ ಮಾಡಿಕೊಂಡಿದ್ದಾರೆ.

ಉಮಾ ಭಾರತಿ ಕಳೆದ ಹಲವಾರು ದಿನಗಳಿಂದ ಪ್ರವಾಸ ಮಾಡ್ತಿದ್ದಾರೆ. ಇತ್ತೀಚೆಗೆ ಕೇದಾರನಾಥ ದರ್ಶನದ ವಿಡಿಯೊವನ್ನು ಹಂಚಿಕೊಂಡಿದ್ದರು. ಪರ್ವತ ಪ್ರಯಾಣದ ಕೊನೆ ದಿನದಂದು ನಾನು ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದೇನೆ. ಕಳೆದ ಮೂರು ದಿನಗಳಿಂದ ಸ್ವಲ್ಪ ಜ್ವರವಿತ್ತು. ಶಾಸಕರು ಸೇರಿದಂತೆ ಎಲ್ಲರಿಂದ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದೆ. ಆದ್ರೂ ನನಗೆ ಕೊರೊನಾ ಬಂದಿದೆ ಎಂದು ಉಮಾ ಭಾರತಿ ಹೇಳಿದ್ದಾರೆ.

ವಂದೇ ಮಾತರಂ ಕುಂಜ್ ನಲ್ಲಿ ನಾನು ಆರಾಮವಾಗಿದ್ದೇನೆ. ನಾಲ್ಕು ದಿನಗಳ ನಂತ್ರ ಮತ್ತೆ ಪರೀಕ್ಷೆ ಮಾಡಿಸಿಕೊಳ್ಳುತ್ತೇನೆಂದು ಉಮಾ ಭಾರತಿ ಹೇಳಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...