ಕಹಿ ಬೇವು ತಿನ್ನೋದು ಕಷ್ಟಕರ ಕೆಲಸ. ಆದ್ರೆ ಆರೋಗ್ಯಕ್ಕೆ ಇದು ಬಹಳ ಪ್ರಯೋಜನಕಾರಿ. ಅನೇಕ ರೋಗಗಳಿಗೆ ಇದನ್ನು ಮದ್ದಿನ ರೂಪದಲ್ಲಿ ಬಳಸಲಾಗುತ್ತದೆ. ಈಗ ಕೊರೊನಾಗೆ ಇದು ಚಿಕಿತ್ಸೆ ನೀಡಬಲ್ಲದ ಎಂಬ ಪ್ರಶ್ನೆಗೆ ಉತ್ತರ ಕಂಡುಹಿಡಿಯುವ ಪ್ರಯತ್ನ ನಡೆದಿದೆ.
ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ, ಎಐಐಎ ನಿಸಾರ್ಗ್ ಹರ್ಬ್ಸ್ ಎಂಬ ಕಂಪನಿಯೊಂದಿಗೆ ಕೈಜೋಡಿಸಿ ಪರೀಕ್ಷೆ ನಡೆಸುತ್ತಿದೆ. ಹರಿಯಾಣದ ಫರೀದಾಬಾದ್‌ನ ಇಎಸ್‌ಐಸಿ ಆಸ್ಪತ್ರೆಯಲ್ಲಿ ಮಾನವ ಪ್ರಯೋಗಗಳನ್ನು ಮಾಡಲಾಗುತ್ತಿದೆ.
ಎಐಐಎ ನಿರ್ದೇಶಕ ಡಾ. ತರುಣ್ ನೇಸಾರಿ ಮತ್ತು ಇಎಸ್‌ಐಸಿ ಆಸ್ಪತ್ರೆಯ ಡೀನ್ ಡಾ. ಅಸೀಮ್ ಸೇನ್ ಅವರ ಮೇಲ್ವಿಚಾರಣೆಯಲ್ಲಿ 6 ವೈದ್ಯರ ತಂಡವನ್ನು ರಚಿಸಲಾಗಿದೆ. ಈ ತಂಡವು 250 ಜನರ ಮೇಲೆ ಪರೀಕ್ಷೆ ನಡೆಸಲಿದೆ. ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟುವಲ್ಲಿ ಬೇವಿನ ರಸ ಎಷ್ಟು ಪರಿಣಾಮಕಾರಿ ಎಂದು ಕಂಡುಹಿಡಿಯುವುದು ಅವರ ಪ್ರಯೋಗದ ಮುಖ್ಯ ಉದ್ದೇಶವಾಗಿದೆ.