ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗ್ತಿದೆ. ಆದ್ರೆ ಕೊರೊನಾದ ಹೊಸ ಹೊಸ ಲಕ್ಷಣ, ಸಮಸ್ಯೆಗಳು ಕಾಣಿಸಿಕೊಳ್ತಿವೆ. ಕೊರೊನಾ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷ್ಯ. ಆದ್ರೀಗ ಕೊರೊನಾದ ಮತ್ತೊಂದು ಸಮಸ್ಯೆ ಕಾಣಿಸಿಕೊಂಡಿದೆ. ಕೊರೊನಾ ಮೆದುಳಿನ ಮೇಲೆ ಪರಿಣಾಮ ಬೀರಿದೆ. 11 ವರ್ಷದ ಹುಡುಗಿಯ ಮೆದುಳಿನ ನರಗಳು ಹಾನಿಗೀಡಾಗಿದ್ದು, ಆಕೆ ಮಂಕಾಗುತ್ತಿದ್ದಾಳೆ.
ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ಇಂತಹ ಮೊದಲ ಪ್ರಕರಣ ಬೆಳಕಿಗೆ ಬಂದಿದೆ. ಏಮ್ಸ್ ಮಕ್ಕಳ ನರವಿಜ್ಞಾನ ವಿಭಾಗದ ವೈದ್ಯರು ಈಗ ಮಗುವಿನ ಆರೋಗ್ಯದ ಬಗ್ಗೆ ವಿವರವಾದ ವರದಿಯನ್ನು ಸಿದ್ಧಪಡಿಸುತ್ತಿದ್ದಾರೆ. ಇದು ಶೀಘ್ರದಲ್ಲೇ ಪ್ರಕಟವಾಗಲಿದೆ.
ವೈದ್ಯರ ಪ್ರಕಾರ, 11 ವರ್ಷದ ಮಗುವಿನಲ್ಲಿ ಕೊರೊನಾ ವೈರಸ್ ಸೋಂಕಿನಿಂದಾಗಿ ತೀವ್ರವಾದ ಡಿಮೈಲೀನೇಟಿಂಗ್ ಸಿಂಡ್ರೋಮ್ (ಎಡಿಎಸ್) ಕಂಡು ಬಂದಿದೆ. ಮೈಲಿನ್ ಎಂಬ ರಕ್ಷಣಾತ್ಮಕ ಪದರದಿಂದ ಸುತ್ತುವರೆದಿರುವ ಮೆದುಳಿನ ರಕ್ತನಾಳವು ಹಾನಿಗೊಳಗಾಗಿದೆ. ಈ ರಕ್ತನಾಳವು ಮೆದುಳಿನಿಂದ ದೇಹದ ಇತರ ಭಾಗಗಳಿಗೆ ಸಂದೇಶವನ್ನು ಸುಲಭವಾಗಿ ತಲುಪಿಸಲು ಸಹಾಯ ಮಾಡುತ್ತದೆ. ನರವೈಜ್ಞಾನಿಕ ಅಥವಾ ನರಮಂಡಲದ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವ ಮೂಲಕ ದೃಷ್ಟಿ, ಸ್ನಾಯುಗಳು, ಗಾಳಿಗುಳ್ಳೆ ಇತ್ಯಾದಿಗಳಿಗೆ ಹಾನಿಯುಂಟಾಗುತ್ತದೆ.