
ಕೊರೊನಾ ಹಾವಳಿ ದೇಶದಲ್ಲಿ ಇನ್ನೂ ನಿಂತಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಲೆ ಇದೆ. ಕೊರೊನಾದಿಂದಾಗಿ ಈ ವರ್ಷ ಯಾವ ಹಬ್ಬ ಹರಿದಿನಗಳು ಪ್ರತಿವರ್ಷದಂತೆ ನಡೆದಿಲ್ಲ. ತುಂಬಾ ಸರಳವಾಗಿ ನಡೆಸಲಾಗುತ್ತಿದೆ. ಇದೀಗ ಮೊಹರಂ ಹಬ್ಬಕ್ಕೂ ಕೊರೊನಾ ಎಫೆಕ್ಟ್ ತಟ್ಟಿದೆ.
ಹೌದು, ಮೊಹರಂ ಸಮಯದಲ್ಲಿ ಯಾರೂ ಮೆರವಣಿಗೆ ಮಾಡುವಂತಿಲ್ಲ ಅಂತಾ ಸುಪ್ರೀಂ ಕೊರ್ಟ್ ಸೂಚಿಸಿದೆ. ಮೊಹರಂ ಹಬ್ಬದಂದು ಮೆರವಣಿಗೆಗೆ ಅವಕಾಶ ನೀಡಿ ಎಂದು ಅನೇಕರು ಸುಪ್ರೀಂ ಮೊರೆ ಹೋಗಿದ್ದರು. ಅವರ ಮನವಿಯನ್ನು ತಿರಸ್ಕರಿಸಿ, ಮೆರವಣಿಗೆಗೆ ಅವಕಾಶ ಇಲ್ಲ ಎಂದು ಆದೇಶವನ್ನೂ ನೀಡಿದೆ.
ಮೆರವಣಿಗೆ ಮಾಡಲು ಅವಕಾಶ ಕೊಟ್ಟರೆ ಸೋಂಕು ಹರಡುವಿಕೆ ಹೆಚ್ಚಾಗುತ್ತದೆ. ನಂತರ ಕೊರೊನಾ ಹೆಚ್ಚಾದರೆ ಒಂದು ಸಮುದಾಯವನ್ನು ದೂಷಿಸಲಾಗುತ್ತದೆ. ಹೀಗಾಗಿ ಮೆರವಣಿಗೆ ಮಾಡಲು ಅವಕಾಶ ಇಲ್ಲ ಎಂದು ಸಿಜೆಐ ಎಸ್.ಎ. ಬೊಬ್ಡೆ ಹೇಳಿದ್ದಾರೆ.