ಕೊರೊನಾ ನಿಯಂತ್ರಣಕ್ಕಾಗಿ ಲಾಕ್ಡೌನ್ ಜಾರಿಗೊಳಿಸಿದ್ದ ಕೇಂದ್ರ ಸರ್ಕಾರ, ಮೊದಲ ಹಂತದಲ್ಲಿ ಒಂದಷ್ಟು ಸಡಿಲಿಕೆಗಳನ್ನು ಮಾಡಿ ಆರ್ಥಿಕ ಚಟುವಟಿಕೆಗಳಿಗೆ ಅನುವು ಮಾಡಿಕೊಟ್ಟಿತ್ತು. ಇದೀಗ ದ್ವಿತೀಯ ಹಂತದಲ್ಲಿ ಮತ್ತಷ್ಟು ಸಡಿಲಿಕೆ ಮಾಡಲಾಗಿದ್ದು, ಆದರೆ ಸೋಂಕು ದಿನೇದಿನೇ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ವಿನಾಯಿತಿಯನ್ನು ನೀಡಲಾಗಿಲ್ಲ.
ಕೇಂದ್ರ ಸರ್ಕಾರ ಘೋಷಿಸಿರುವ ಹೊಸ ಮಾರ್ಗಸೂಚಿ ಜುಲೈ 1ರಿಂದ ಜುಲೈ 31ರವರೆಗೆ ಅನ್ವಯವಾಗಲಿದ್ದು, ಶಾಲಾ – ಕಾಲೇಜುಗಳ ರಜೆ ಅಲ್ಲಿಯವರೆಗೆ ಮುಂದುವರಿಯಲಿದೆ. ಮೆಟ್ರೋ ರೈಲು ಸಂಚಾರ ಆರಂಭಿಸದಿರಲು ತೀರ್ಮಾನಿಸಲಾಗಿದ್ದು, ಅಂತರಾಷ್ಟ್ರೀಯ ವಿಮಾನ ಯಾನದ ಮೇಲಿನ ನಿರ್ಬಂಧ ಮುಂದುವರಿಯಲಿದೆ.
ಜಿಮ್, ಸ್ವಿಮಿಂಗ್ ಪೂಲ್, ಬಾರ್, ಚಿತ್ರಮಂದಿರಗಳು ಸಹ ಬಂದ್ ಆಗಿರಲಿದ್ದು, ಸಾಮಾಜಿಕ, ರಾಜಕೀಯ ಸಭೆ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಹೆಚ್ಚಿನ ಜನರು ಸೇರುವ ಸಮಾವೇಶಗಳ ಮೇಲಿನ ನಿರ್ಬಂಧವನ್ನು ಮುಂದುವರಿಸಲಾಗಿದೆ.