ಜೆಡಿಯು ಹಿರಿಯ ನಾಯಕ ಕಪಿಲ್ ದೇವ್ ಕಾಮತ್ ಕರೊನಾದಿಂದಾಗಿ ಬಿಹಾರದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 69 ವರ್ಷದವರಾಗಿದ್ದ ಕಾಮತ್, ನಿತೀಶ್ ಕುಮಾರ್ ಸಂಪುಟದಲ್ಲಿ ಪಂಚಾಯತ್ ರಾಜ್ ಇಲಾಖೆಯ ಸಚಿವರಾಗಿದ್ದರು. ಕಿಡ್ನಿ ಸೋಂಕಿನಿಂದ ಪಾಟ್ನಾದ ಏಮ್ಸ್ಗೆ ದಾಖಲಾಗಿದ್ದ ಕಪಿಲ್ ದೇವ್ ಕಾಮತ್ರಿಗೆ ಕರೊನಾ ಸೋಂಕು ದೃಢಪಟ್ಟಿತ್ತು .
1980ರಲ್ಲಿ ರಾಜಕೀಯ ಪ್ರವೇಶಿಸಿದ್ದ ಕಾಮತ್ 1985ರಲ್ಲಿ ಚುನಾವಣಾ ಕಣಕ್ಕೆ ಇಳಿದಿದ್ರು. ಮೊದಲ ಚುನಾವಣೆಯಲ್ಲಿ ಸೋಲನ್ನ ಅನುಭವಿಸಿದ್ರೂ ಸಹ ಬಿಹಾರದ ಅನೇಕ ಮಹಾನ್ ನಾಯಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ರು.
ಜೆಡಿಯು ಸೇರುವುದಕ್ಕೂ ಮುನ್ನ ಕಾಂಗ್ರೆಸ್ನಲ್ಲಿದ್ದ ಕಾಮತ್ 1990ರಲ್ಲಿ ಬಿಹಾರದಲ್ಲಿದ್ದ ಜಗನ್ನಾಥ್ ಮಿಶ್ರಾ ಸಂಪುಟದಲ್ಲಿ ಸಂಯೋಜಕರಾಗಿ ಕಾರ್ಯ ನಿರ್ವಹಿಸಿದ್ದರು. 90ರ ದಶಕದಲ್ಲಿ ಕಾಂಗ್ರೆಸ್ ತ್ಯಜಿಸಿದ್ದ ಕಾಮತ್ 2015ರಲ್ಲಿ ಜೆಡಿಯು ಪಕ್ಷದಿಂದ ಶಾಸಕರಾಗಿ ಆಯ್ಕೆಯಾದ್ರು.
ಕಾಮತ್ರ ಆರೋಗ್ಯ ಸ್ಥಿತಿಯನ್ನ ಗಮನದ್ದಲ್ಲಿಟ್ಟುಕೊಂಡಿದ್ದ ಜೆಡಿಯು ಈ ಬಾರಿ ಅವರ ಸೊಸೆ ಮೀನಾ ಕಾಮತ್ರಿಗೆ ವಿಧಾನಸಭಾ ಟಿಕೆಟ್ ನೀಡಿತ್ತು. ಬಿಹಾರ ಎನ್ಡಿಎ ಸರ್ಕಾರದಲ್ಲಿ ಕರೊನಾಗೆ ಬಲಿಯಾದ ಎರಡನೇ ಸಚಿವ ಇವರಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಗುರುಗ್ರಾಮ್ನ ಮೇದಾಂತಾ ಆಸ್ಪತ್ರೆಯಲ್ಲಿ ವಿನೋದ್ ಸಿಂಗ್ ನಿಧನರಾಗಿದ್ದರು. ಬಿಹಾರ ಸಿಎಂ ನಿತೀಶ್ ಕುಮಾರ್, ಕಪಿಲ್ ದೇವ್ ಕಾಮತ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.