ದೇಶದಲ್ಲಿ ಕೊರೊನಾ ಎರಡನೇ ಅಲೆ ವ್ಯಾಪಕವಾಗುತ್ತಿದ್ದು, ಕಳೆದ ಕೆಲವು ದಿನಗಳಿಂದ ಪ್ರತಿನಿತ್ಯ ಎರಡು ಲಕ್ಷಕ್ಕೂ ಅಧಿಕ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ. ಜೊತೆಗೆ ಸಾವಿನ ಸಂಖ್ಯೆಯೂ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ಇದು ಜನಸಾಮಾನ್ಯರ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಇದರ ಜೊತೆಗೆ ದೇಶದಲ್ಲಿ ತಲೆದೋರಿರುವ ಆಕ್ಸಿಜನ್ ಕೊರತೆ, ರೆಮ್ ಡಿಸಿವರ್ ಇಂಜೆಕ್ಷನ್ ಕೊರತೆಯೂ ಸಹ ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣವೆನ್ನಲಾಗಿದೆ. ಅಲ್ಲದೆ ಕೊರೊನಾ ಸೋಂಕಿಗೊಳಗಾದ ಕೆಲವರು ಭಯ ಹಾಗೂ ಆತಂಕದಿಂದ ಸಾವನ್ನಪ್ಪಿರುವ ಕುರಿತು ಮಾತುಗಳು ಕೇಳಿ ಬರುತ್ತಿವೆ. ಇದರ ಮಧ್ಯೆ ಈ ಸುದ್ದಿ ಒಂದಷ್ಟು ನೆಮ್ಮದಿ ನೀಡುತ್ತದೆ.
ರಾಜ್ಯದ ಜನರೇ ಗಮನಿಸಿ…! ಬೆಳಗ್ಗೆ 10 ಗಂಟೆಯೊಳಗೆ ಅಗತ್ಯ ವಸ್ತು ಖರೀದಿಸಿ
ಮಹಾರಾಷ್ಟ್ರದ ಪುಣೆಯ 102 ವರ್ಷದ ವೃದ್ಧೆಯೊಬ್ಬರು ಕೊರೊನಾ ಸೋಂಕಿಗೊಳಗಾದರೂ ಸಹ ಆತಂಕಗೊಳ್ಳದೆ ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಬಳಿಕ ಈಗ ಡಿಸ್ಚಾರ್ಜ್ ಆಗಿದ್ದಾರೆ. ಇಂಟರೆಸ್ಟಿಂಗ್ ಸಂಗತಿ ಎಂದರೆ ಸುಶೀಲ ಎಂಬ ಈ ಮಹಿಳೆ ತಮ್ಮ 102 ನೇ ವರ್ಷದ ಹುಟ್ಟು ಹಬ್ಬವನ್ನು ಆಸ್ಪತ್ರೆಯಲ್ಲೇ ಆಚರಿಸಿಕೊಂಡಿದ್ದರು.