ರೈತರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ರೈತರು ಬೆಳೆಯುವ ಹಣ್ಣು, ತರಕಾರಿ, ಹೂವು ಮೊದಲಾದ ಬೆಳೆಗಳನ್ನು ತ್ವರಿತವಾಗಿ ಸಾಗಿಸುವ ಸಲುವಾಗಿ ಕಿಸಾನ್ ರೈಲು ಸಂಚಾರ ಇಂದಿನಿಂದ ಆರಂಭವಾಗಲಿದೆ.
ಈ ರೈಲಿನಲ್ಲಿ ರೆಫ್ರಿಜರೇಟರ್ ಅಳವಡಿಕೆ ಮಾಡಿದ್ದು, ರೈತರ ಉತ್ಪನ್ನಗಳು ಹಾಳಾಗದಂತೆ ಸಂರಕ್ಷಿಸಬಹುದಾಗಿದೆ. ಅಲ್ಲದೆ ತ್ವರಿತ ಗತಿಯಲ್ಲಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಇವುಗಳನ್ನು ಸಾಗಿಸಬಹುದಾಗಿದೆ.
ಕಿಸಾನ್ ರೈಲು ಸಂಚಾರ ಆರಂಭ ಮಾಡುವ ಪ್ರಸ್ತಾವವನ್ನು ಈ ಹಿಂದೆ ರೈಲ್ವೆ ಸಚಿವರಾಗಿದ್ದ ಮಮತಾ ಬ್ಯಾನರ್ಜಿ ಹೇಳಿದ್ದರಾದರೂ ಅದನ್ನು ಈಗ ಕಾರ್ಯಗತಗೊಳಿಸಲಾಗಿದೆ. ಮಹಾರಾಷ್ಟ್ರದ ದೇವಳ್ಳಿಯಿಂದ ಬಿಹಾರದ ದಾನಾಪುರಕ್ಕೆ ಮೊದಲ ರೈಲು ಇಂದು ಸಂಚರಿಸಲಿದೆ.