ಕೊರೊನಾದಿಂದಾಗಿ ಇಡೀ ದೇಶವನ್ನೇ ಲಾಕ್‌ಡೌನ್ ಮಾಡಲಾಗಿತ್ತು. ಲಾಕ್‌ಡೌನ್‌ನಿಂದಾಗಿ ದೇಶದ ಆರ್ಥಿಕತೆ ಕುಸಿದಿರುವುದು ಗೊತ್ತಿರುವ ವಿಚಾರವೇ. ಆರ್ಥಿಕತೆ ಕುಸಿಯುತ್ತಿರುವ ಬೆನ್ನಲ್ಲೇ ಲಾಕ್‌ಡೌನ್ ಸಡಿಲಿಕೆ ಮಾಡಿ ಅನೇಕ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲಾಗಿತ್ತು.
ಇದರ ಜೊತೆಗೆ ಕೊರೊನಾದಿಂದಾಗಿ ಅನೇಕ ಮಂದಿ ಕೆಲಸ ಕಳೆದುಕೊಂಡಿದ್ದು ಇದೆ. ಹೀಗಿರುವಾಗ 21 ಸಾವಿರಕ್ಕಿಂತ ಕಡಿಮೆ ಸಂಬಳ ಪಡೆಯುವ ನೌಕರರಿಗೆ ಕೇಂದ್ರ ಸಿಹಿಸುದ್ದಿಯೊಂದನ್ನ ನೀಡಿದೆ.
ಹೌದು, ಖಾಸಗಿ ಕಂಪನಿಗಳಲ್ಲಿ 21 ಸಾವಿರಕ್ಕಿಂತ ಕಡಿಮೆ ಸಂಬಳಕ್ಕಾಗಿ ಕೆಲಸ ಮಾಡುತ್ತಿರುವ ನೌಕರರಿಗೆ ಕೇಂದ್ರ ಸಹಾಯ ಮಾಡುತ್ತಿದೆ. ನೌಕರರ ರಾಜ್ಯ ವಿಮಾ ನಿಗಮ ಅಡಿಯಲ್ಲಿ ಅನೇಕ ಕ್ರಮಗಳನ್ನು ಕೈಗೊಂಡಿದೆ. ಇಎಸ್‌ಐ ಯೋಜನೆಯಡಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ವೈದ್ಯಕೀಯ ಸೇವೆ ಒದಗಿಸಲು ಮುಂದಾಗಿದೆ.
ಖಾಸಗಿ ಕಂಪನಿಗಳಲ್ಲಿ ದುಡಿಯುತ್ತಿರುವ ನೌಕರರಿಗೆ ರಾಜ್ಯ ವಿಮಾ ನಿಗಮ ಇಎಸ್‌ಐ ಯೋಜನೆಯಡಿ ಉಚಿತ ವೈದ್ಯಕೀಯ ಸೇವೆ ಸಿಗಲಿದೆ. ಕೊರೊನಾ ಸೋಂಕಿಗೆ ನೌಕರರು ತುತ್ತಾದರೆ ಇದಕ್ಕೆ ಬೇಕಾದ ಹಣದ ಖರ್ಚು ಭರಿಸಲು ಸರ್ಕಾರ ರೆಡಿಯಾಗಿದೆ. 10ಕ್ಕಿಂತ ಹೆಚ್ಚು ನೌಕರರು ಕೆಲಸ ಮಾಡುವ ಎಲ್ಲಾ ಕಂಪನಿಗಳಿಗೂ ಈ ಸೇವೆ ಲಭ್ಯವಿದೆ. ಇನ್ನು ಈ ನಿರ್ಧಾರವು ಜುಲೈ 1 ರಿಂದಲೇ ಜಾರಿಗೆ ಬಂದಿದೆ.