alex Certify ಕೃಷಿ ವಿಧೇಯಕ ವಿರೋಧಿಸಿ ರೂಲ್ ಬುಕ್ ಹರಿದು ಟಿಎಂಸಿ ಸಂಸದನ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೃಷಿ ವಿಧೇಯಕ ವಿರೋಧಿಸಿ ರೂಲ್ ಬುಕ್ ಹರಿದು ಟಿಎಂಸಿ ಸಂಸದನ ಆಕ್ರೋಶ

ನವದೆಹಲಿ: ಕೇಂದ್ರ ಸರ್ಕಾರ ಮಂಡಿಸಿರುವ ಕೃಷಿ ವಿಧೇಯಕ ರಾಜ್ಯಸಭೆಯಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವಿನ ಗದ್ದಲಕ್ಕೆ ಕಾರಣವಾಗಿದೆ. ಚರ್ಚೆಗೆ ಅವಕಾಶ ನೀಡದೇ ವಿಧೇಯಕವನ್ನು ಧ್ವನಿಮತಕ್ಕೆ ಹಾಕುತ್ತಿದ್ದಂತೆಯೇ ಟಿಎಂಸಿ ಸಂಸದ ಡೆರೆಕ್ ಒ ಬ್ರಿಯೆನ್ ರೂಲ್ ಬುಕ್ ಹರಿದು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಇಂದು ರಾಜ್ಯ ಸಭೆಯಲ್ಲಿ ಬೆಳೆಗಳ ವಾಣಿಜ್ಯ, ವ್ಯಾಪಾರ ಪ್ರಚಾರ ಮತ್ತು ಸೌಲಭ್ಯ ಮಸೂದೆ ಹಾಗೂ ರೈತರ ಸಬಲೀಕರಣ ಮತ್ತು ಸಂರಕ್ಷಣೆ-ಬೆಲೆ ಭರವಸೆ ಕೃಷಿ ಸೇವೆಗಳ ಮಸೂದೆಯನ್ನು ಮಂಡಿಸಿದರು.

ಈ ವೇಳೆ ಮಾತನಾಡಿದ ಸಚಿವರು ಈ ಮಸೂದೆಗಳಿಗೂ ರೈತರ ಉತ್ಪನ್ನಗಳ ಬೆಂಬಲ ಬೆಲೆ ಖರೀದಿಗೂ ಯಾವುದೇ ಸಂಬಂಧವಿಲ್ಲ. ರೈತರ ಉತ್ಪನ್ನಗಳನ್ನು ದೇಶದ ಯಾವುದೇ ಭಾಗಗಳಲ್ಲಿ ಮುಕ್ತವಾಗಿ ಮಾರಾಟ ಮಾಡಲು ಮಸೂದೆಯಲ್ಲಿ ಅವಕಾಶವಿದೆ. ಕೃಷಿ ಉತ್ಪನ್ನಗಳ ಆನ್ ಲೈನ್ ಖರೀದಿ ಮಾರಾಟಕ್ಕೂ ಇದು ಸಹಕಾರಿಯಾಗಿದೆ ಎಂದರು.

ಮಸೂದೆ ಮಂಡನೆಯಾಗುತ್ತಿದ್ದಂತೆಯೇ ಉಪಸಭಾಪತಿ ಹರಿವಂಶ್ ನಾರಾಯಣ್ ಸಿಂಗ್, ಮಸೂದೆಯನ್ನು ಧ್ವನಿ ಮತಕ್ಕೆ ಹಾಕಲು ಆದೇಶ ನೀಡಿದರು. ಚರ್ಚೆಗೆ ಅವಕಾಶ ನೀಡದೇ ಧ್ವನಿ ಮತಕ್ಕೆ ಹಾಕಿದ ಉಪ ಸಭಾಪತಿ ಕ್ರಮ ಖಂಡಿಸಿ ಟಿಎಂಸಿ ಸಂಸದ ಡೆರೆಕ್ ಒ ಬ್ರಿಯೆನ್ ಪ್ರತಿಭಟನೆ ನಡೆಸಿದರು.

ಒಂದು ಹಂತದಲ್ಲಿ ಸದನದ ಬಾವಿಗಳಿದು ಉಪ ಸಭಾಪತಿ ಎದುರಲ್ಲೇ ರೂಲ್ ಬುಕ್ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಮಧ್ಯ ಪ್ರವೇಶಿಸಿದ ಭದ್ರತಾ ಸಿಬ್ಬಂದಿ, ಡೆರೆಕ್ ಅವರನ್ನು ತಡೆದರು.

ಕೇಂದ್ರ ಸರ್ಕಾರ ಮಂಡಿಸಿರುವ ಕೃಷಿ ವಿಧೇಯಕ ರೈತ ವಿರೋಧಿಯಾಗಿದ್ದು, ಇದು ಕೃಷಿ ಭೂಮಿಯನ್ನು ಕಾರ್ಪೊರೇಟ್ ಕಂಪನಿಗಳ ಕೈವಶ ಮಾಡುವ ಕ್ರಮ ಎಂದು ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ವಿಪಕ್ಷಗಳ ವಿರೋಧದ ನಡುವೆಯೂ ಮಸೂದೆಯನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...