ಭಯಭೀತನಾದ ವ್ಯಕ್ತಿಯೊಬ್ಬ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಸರ್ಕಾರಿ ಟೆಲಿಮೆಡಿಸಿನ್ ಸಹಾಯವಾಣಿ ಸಂಖ್ಯೆ 1100 ಗೆ ಕರೆ ಮಾಡಿದ್ದಾನೆ. ನಂತ್ರ ಆತ ಹೇಳಿದ ಮಾತು ಕೇಳಿ ವೈದ್ಯರು ಗೊಂದಲಕ್ಕೊಳಗಾಗಿದ್ದಾರೆ.
ಕರೆ ಮಾಡಿದ ವ್ಯಕ್ತಿ ಹೆಂಡತಿ ಬಗ್ಗೆ ದೂರು ನೀಡಿದ್ದಾನೆ. ಪತ್ನಿ ದಿನಕ್ಕೆ 500 ಲೀಟರ್ ನೀರು ಖಾಲಿ ಮಾಡ್ತಾಳೆ ಎಂದಿದ್ದಾನೆ. ಚಕಿತಗೊಂಡ ವೈದ್ಯರು ಸಮಸ್ಯೆ ಏನು ಎಂದಿದ್ದಾರೆ. ಪ್ರತಿದಿನ 500 ಲೀಟರ್ ನೀರಿನ ಟ್ಯಾಂಕ್ ಖಾಲಿ ಮಾಡುತ್ತಾಳೆ. ಅವಳು ಇಡೀ ಮನೆಯನ್ನು ಮೂರು ಬಾರಿ ಕ್ಲೀನ್ ಮಾಡ್ತಾಳೆ. ಬೀರು, ಟೇಬಲ್, ಶೂ ರ್ಯಾಕ್ ಸೇರಿದಂತೆ ಎಲ್ಲವನ್ನೂ ಪ್ರತಿ ದಿನ ಮೂರು ಬಾರಿ ಕ್ಲೀನ್ ಮಾಡ್ತಾಳೆ ಎಂದಿದ್ದಾನೆ.
ವೈದ್ಯರ ಪ್ರಕಾರ, ಲಾಕ್ ಡೌನ್, ಕೊರೊನಾ ಸಂದರ್ಭದಲ್ಲಿ ಅನೇಕರ ಮಾನಸಿಕ ಸ್ಥಿತಿ ಹದಗೆಟ್ಟಿದೆ. ಮಹಿಳೆ ಮನೆ ಸ್ವಚ್ಛಗೊಳಿಸುವ ಬಗ್ಗೆ ಪಕ್ಕದ ಮನೆಯವರು ಪ್ರಶ್ನೆ ಮಾಡಿದ ನಂತ್ರ ಆತಂಕಗೊಂಡ ಪತಿ ಫೋನ್ ಮಾಡಿದ್ದಾನೆ. ಮನೆಯಲ್ಲಿ ಬಂಧಿಯಂತೆ ವಾಸವಾಗಿದ್ದ ಪತ್ನಿ, ಪಕ್ಕದ ಮನೆಯವರನ್ನು ಭೇಟಿ ಮಾಡಿದ್ರೂ ಸ್ನಾನ ಮಾಡಬೇಕಂತೆ.
ಇದು ಈಕೆ ಸಮಸ್ಯೆ ಮಾತ್ರವಲ್ಲ. ರಾಜ್ಯ ಸರ್ಕಾರ ಮೇ ತಿಂಗಳಿನಲ್ಲಿ ಈ ಸಹಾಯವಾಣಿ ಶುರು ಮಾಡಿದೆ. ಅಲ್ಲಿಂದ ಇಲ್ಲಿಯವರೆಗೆ 12 ಸಾವಿರಕ್ಕೂ ಹೆಚ್ಚು ಮಂದಿ ಕರೆ ಮಾಡಿ ಸಲಹೆ ಪಡೆದಿದ್ದಾರೆ.