ಉತ್ತರ ಪ್ರದೇಶದ ಸೀತಾಪುರದಲ್ಲಿ ಆಶ್ಚರ್ಯಕರ ಘಟನೆ ನಡೆದಿದೆ. ಮಹಿಳೆಯೊಬ್ಬಳು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಅದ್ರಲ್ಲಿ ಮೂರು ಹೆಣ್ಣಾದ್ರೆ ಒಂದು ಗಂಡು ಮಗು.ಈ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರಲ್ಲಿ ಕುತೂಹಲ ಹೆಚ್ಚಾಗಿದೆ. ನವಜಾತ ಶಿಶುಗಳನ್ನು ನೋಡಲು ಜನರ ದಂಡು ಬರ್ತಿದೆ.
ರೌಸಾ ಪೊಲೀಸ್ ಠಾಣಾ ಪ್ರದೇಶದಲ್ಲಿ ಮೌಸಮ್ ದೇವಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ.ನಿನ್ನೆ ರಾತ್ರಿ ನೋವು ಕಾಣಿಸಿಕೊಂಡಿದೆ. ಕುಟುಂಬಸ್ಥರು ಬೆಳಿಗ್ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ತಯಾರಿ ನಡೆಸಿದ್ದರು. ಆದ್ರೆ ರಾತ್ರಿಯೇ ಮಹಿಳೆ ಮೊದಲು ಅವಳಿ ಮಕ್ಕಳಿಗೆ ಜನ್ಮ ನೀಡಿದಳು. ನಂತ್ರ ಮತ್ತಿಬ್ಬರು ಮಕ್ಕಳಿಗೆ ಜನ್ಮ ನೀಡಿದ್ಲು.
ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ. ಮನೆಯಲ್ಲಿಯೇ ನಾಲ್ಕು ಮಕ್ಕಳ ಜನನವಾಗಿರುವುದು ನನ್ನ ಪುಣ್ಯ. ದೇವರ ಕೃಪೆಯೆಂದು ಮೌಸಮ್ ಪತಿ ಮುನ್ನಾ ಹೇಳಿದ್ದಾನೆ.