ಕೊರೊನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಬಹಳ ಮುಖ್ಯ. ಕೊರೊನಾ ಪ್ರಕರಣಗಳು ಹೆಚ್ಚಾಗ್ತಿದ್ದರೂ ಸಾಮಾಜಿಕ ಅಂತರವನ್ನು ಜನರು ಮರೆತಿದ್ದಾರೆ. ಹರ್ಯಾಣದಲ್ಲಿ ನಡೆದ ಘಟನೆ ಇದಕ್ಕೆ ಉತ್ತಮ ನಿದರ್ಶನವಾಗಿದೆ.
ಹರಿಯಾಣದ ಜಿಂದ್ ಜಿಲ್ಲೆಯ ಹಪುರ್‌ಪುರ ಗ್ರಾಮದಲ್ಲಿ 24 ಜನರಿಗೆ ಕೊರೊನಾ ಕಾಣಿಸಿಕೊಂಡಿದೆ. ಇದಕ್ಕೆ ಕಾರಣವಾಗಿದ್ದು ಒಂದು ಹುಕ್ಕಾ. 24 ಮಂದಿಯಲ್ಲಿ ಒಬ್ಬ ಸಾವನ್ನಪ್ಪಿದ್ದಾನೆ. ಘಟನೆ ನಂತ್ರ ಇಡೀ ಗ್ರಾಮವನ್ನು ಸೀಲ್ ಮಾಡಲಾಗಿದೆ.
ಒಬ್ಬರಾದ್ಮೇಲೆ ಒಬ್ಬರಂತೆ 24 ಮಂದಿ ಒಂದೇ ಹುಕ್ಕಾ ಬಳಸಿದ್ದಾರೆ. ಜುಲೈ 8ರಂದು ಯುವಕನೊಬ್ಬ ಗುರುಗ್ರಾಮ್ ಮದುವೆಗೆ ಹೋಗಿದ್ದ. ಅಲ್ಲಿಂದ ವಾಪಸ್ ಬಂದ್ಮೇಲೆ ಪರೀಕ್ಷೆ ನಡೆಸಿದ್ದಾನೆ. ಅವನಿಗೆ ಪಾಸಿಟಿವ್ ಬಂದಿದೆ. ನಂತ್ರ ಸ್ಥಳೀಯ ಆಡಳಿತ ವಿಚಾರಣೆ ಶುರು ಮಾಡಿದೆ. ಆಗ ಆತನ ಜೊತೆ ಅನೇಕರು ಪ್ರತಿ ದಿನ ಹುಕ್ಕಾ ಸೇದುತ್ತಿದ್ದರು ಎಂಬುದು ಗೊತ್ತಾಗಿದೆ. ಎಲ್ಲ ಯುವಕರಿಗೆ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಬಂದಿದೆ.