
ಬಸ್, ಟ್ರಕ್ ಹಾಗೂ ಕೆಲ ವಾಹನಗಳ ಗಾತ್ರದ ಕುರಿತಂತೆ ಕೇಂದ್ರ ಸಾರಿಗೆ ಸಚಿವಾಲಯ ಮಹತ್ವದ ತೀರ್ಮಾನ ಕೈಗೊಂಡಿದೆ. ಇವುಗಳ ಉದ್ಧ ಹಾಗೂ ಎತ್ತರ ಮಾಡಲು ಗ್ರೀನ್ ಸಿಗ್ನಲ್ ನೀಡಲಾಗಿದೆ.
ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸಲು ಹಾಗೂ ಸರಕುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಾಗಿಸಲು ಅನುವಾಗುವಂತೆ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಹೊಸ ವಾಹನಗಳು ಮುಂದಿನ ದಿನಗಳಲ್ಲಿ ರಸ್ತೆಗಿಳಿಯಲಿವೆ.
ಸರಕು ಸಾಗಣೆ ವಾಹನಗಳು ಲೋಡ್ ನಲ್ಲಿ ಶೇಕಡಾ 25ರಷ್ಟು ಏರಿಸಲು ಎರಡು ವರ್ಷಗಳ ಹಿಂದೆಯೇ ಸಾರಿಗೆ ಸಚಿವಾಲಯ ಅನುಮತಿ ನೀಡಿದ್ದು, ಈಗ ಬಸ್ ಗಳ ಉದ್ದ ಹಾಗೂ ಸೀಟುಗಳ ಸಂಖ್ಯೆ ಹೆಚ್ಚಿಸಲು ಅಸ್ತು ಎನ್ನಲಾಗಿದೆ.