ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಾಗಿದ್ದಾರೆ. ಮಧ್ಯರಾತ್ರಿ ಷಾ ಏಮ್ಸ್ ಗೆ ದಾಖಲಾಗಿದ್ದಾರೆ. ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ನೇತೃತ್ವದ ವೈದ್ಯರ ತಂಡ ಷಾಗೆ ಚಿಕಿತ್ಸೆ ನೀಡ್ತಿದೆ.
ಷಾಗೆ ಕೊರೊನಾ ವೈರಸ್ ಕಾಣಿಸಿಕೊಂಡಿತ್ತು.ಇತ್ತೀಚೆಗೆ ಅವರು ಚೇತರಿಸಿಕೊಂಡಿದ್ದರು. ಆದ್ರೆ ಮೂರ್ನಾಲ್ಕು ದಿನಗಳಿಂದ ನೋವು, ಆಯಾಸ ಕಾಣಿಸಿಕೊಂಡಿತ್ತು. ಮತ್ತೆ ಕೊರೊನಾ ಪರೀಕ್ಷೆ ಮಾಡಿಸಿದ್ದಾರೆ. ಆದ್ರೆ ಕೊರೊನಾ ನೆಗೆಟಿವ್ ಬಂದಿದೆ. ಏಮ್ಸ್ ಪೋಸ್ಟ್ ಕೋವಿಡ್ ಕೇರ್ ಗೆ ದಾಖಲಿಸಲಾಗಿದೆ. ಅವ್ರ ಆರೋಗ್ಯ ಉತ್ತಮವಾಗಿದೆ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ.
ಶುಕ್ರವಾರ ಕೊರೊನಾ ನೆಗೆಟಿವ್ ಬಂದಿದೆ ಎಂದು ಷಾ ಹೇಳಿದ್ದರು. ಹಾಗೆ ವೈದ್ಯರ ಸಲಹೆ ಮೇರೆಗೆ ಕೆಲ ದಿನ ಮನೆಯಲ್ಲಿರುವುದಾಗಿ ಅವರು ಹೇಳಿದ್ದರು.