alex Certify ಎಷ್ಟು ದಿನಗಳ ನಂತ್ರ ಮತ್ತೆ ಕಾಡುತ್ತೆ ಕೊರೊನಾ…? ನಿಮಗೆ ತಿಳಿದಿರಲಿ ಈ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಷ್ಟು ದಿನಗಳ ನಂತ್ರ ಮತ್ತೆ ಕಾಡುತ್ತೆ ಕೊರೊನಾ…? ನಿಮಗೆ ತಿಳಿದಿರಲಿ ಈ ಮಾಹಿತಿ

ಕೊರೊನಾ ವೈರಸ್ ನಿಯಂತ್ರಣಕ್ಕೆ ಬಂದಿದ್ರೂ ಸೋಂಕು ಸಂಪೂರ್ಣವಾಗಿ ಕಡಿಮೆಯಾಗಿಲ್ಲ. ಕೊರೊನಾ ಸೋಂಕು ಒಮ್ಮೆ ಬಂದ ವ್ಯಕ್ತಿಗೆ ಮತ್ತೊಮ್ಮೆ ಬರಲ್ಲ ಎಂಬುದು ಸುಳ್ಳು. ಕೊರೊನಾ ಮತ್ತೊಮ್ಮೆ ಆಕ್ರಮಣ ಮಾಡುವ ಸಾಧ್ಯತೆಯಿದೆ. ಈಗಾಗಲೇ ಎರಡನೇ ಬಾರಿ ಸೋಂಕಿಗೆ ಒಳಗಾದವರಿದ್ದಾರೆ.

ಕೊರೊನಾ ಸೋಂಕು ಎರಡನೇ ಬಾರಿ ಯಾವಾಗ ಆಕ್ರಮಣ ಮಾಡಬಲ್ಲದು ಎಂಬುದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹೇಳಿದೆ. ಸಾಮಾನ್ಯವಾಗಿ ಕೊರೊನಾದಿಂದ ಗುಣಮುಖರಾದ ವ್ಯಕ್ತಿ ದೇಹದಲ್ಲಿ ಐದು ತಿಂಗಳವರೆಗೆ ರೋಗ ನಿರೋಧಕ ಶಕ್ತಿ ಇರುತ್ತದೆ. ನಂತ್ರ ಅವರಿಗೆ ಕೊರೊನಾ ಮತ್ತೆ ಕಾಡುವ ಸಾಧ್ಯತೆಯಿರುತ್ತದೆ ಎಂದು ಐಸಿಎಂಆರ್ ಹೇಳಿದೆ.

ದೇಶದಲ್ಲಿ ಮರು ಸೋಂಕಿತರ ಸಂಖ್ಯೆ ತುಂಬಾ ಕಡಿಮೆಯಿದೆ. ಅಹಮದಾಬಾದ್ ಮತ್ತು ದೆಹಲಿಯಲ್ಲಿ ಎರಡು ಪ್ರಕರಣ ವರದಿಯಾಗಿದೆ. ಆದ್ರೆ ನಿರ್ಲಕ್ಷ್ಯ ಸಲ್ಲದು ಎಂದು ಐಸಿಎಂಆರ್ ಹೇಳಿದೆ. ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕೆಂದು ಐಸಿಎಂಆರ್ ಹೇಳಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶಗಳ ಪ್ರಕಾರ, ಪ್ರಸ್ತುತ ಜಗತ್ತಿನಲ್ಲಿ ಸುಮಾರು 24 ಮರು ಸೋಂಕು ಪ್ರಕರಣಗಳಿವೆ. ಅಂತಹ ಪ್ರಕರಣಗಳನ್ನು ಗುರುತಿಸಲು 90 ರಿಂದ 100 ದಿನಗಳು ತೆಗೆದುಕೊಳ್ಳಬಹುದು. ಮರು ಸೋಂಕಿತರಲ್ಲಿ ಅಪಾಯ ಹೆಚ್ಚು. ಅಮೆರಿಕಾದಲ್ಲಿ ಮರು ಸೋಂಕಿಗೊಳಗಾಗಿದ್ದ ವ್ಯಕ್ತಿ ಸ್ಥಿತಿ ಗಂಭೀರವಾಗಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...