ದೇಶದಲ್ಲಿ ಕೊರೊನಾ ರಾಷ್ಟ್ರಧ್ವಜದ ಮಾರಾಟದ ಮೇಲೂ ಪರಿಣಾಮ ಬೀರಿದೆ. ಕೋವಿಡ್ 19 ರ ಕಾರಣದಿಂದಾಗಿ ದೇಶದ ತ್ರಿವರ್ಣ ಧ್ವಜಗಳ ಮಾರಾಟವು ಶೇಕಡಾ 50 ರಷ್ಟು ಕಡಿಮೆಯಾಗಿದೆ. ಇಂದು ಇಡೀ ದೇಶದಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಆಗಸ್ಟ್ 15 ರಂದು ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ.
ಲಾಕ್‌ಡೌನ್‌ನಿಂದಾಗಿ ರಾಷ್ಟ್ರಧ್ವಜದ ಉತ್ಪಾದನೆ ಮತ್ತು ಮಾರಾಟದ ಮೇಲೆ ನೇರ ಪರಿಣಾಮ ಬೀರಿದೆ. ಲಾಕ್‌ಡೌನ್‌ನಲ್ಲಿ ಅನೇಕ ಘಟಕಗಳು ಕೆಲಸವನ್ನು ನಿಲ್ಲಿಸಿದ್ದವು. ಕಾಲಕಾಲಕ್ಕೆ ಅಲ್ಪಾವಧಿಯ ಲಾಕ್‌ಡೌನ್ ಮತ್ತು ಸಾಂಕ್ರಾಮಿಕ ರೋಗದಿಂದಾಗಿ ಉತ್ಪಾದನಾ ಘಟಕಗಳಲ್ಲಿನ ಕಾರ್ಮಿಕರ ಸಂಖ್ಯೆ ಕಡಿಮೆಯಾಗಿತ್ತು ಇದರಿಂದಾಗಿ ಉತ್ಪಾದನೆ ಕಡಿಮೆಯಾಗಿದೆ. ಮಾರಾಟವು ಶೇಕಡಾ 50 ರಷ್ಟು ಕಡಿಮೆಯಾಗಿದೆ.
ಕೆಕೆಜಿಎಸ್ಎಸ್ ಕಾರ್ಯದರ್ಶಿ ಶಿವಾನಂದ್ ಮಾಥಪತಿ ಅವರ ಪ್ರಕಾರ, ಕೆಕೆಜಿಎಸ್ಎಸ್ ಅಡಿಯಲ್ಲಿ ಪ್ರಸ್ತುತ ಸುಮಾರು 500 ಕಾರ್ಮಿಕರು ಧ್ವಜ ನಿರ್ಮಾಣದಲ್ಲಿ ತೊಡಗಿದ್ದರಂತೆ. ಅದ್ರಲ್ಲಿ ಶೇಕಡಾ 90ರಷ್ಟು ಮಹಿಳೆಯರು. ಕಳೆದ ವರ್ಷ ಕೆಕೆಜಿಎಸ್‌ಎಸ್ 3 ಕೋಟಿ ರೂಪಾಯಿ ಮೌಲ್ಯದ ರಾಷ್ಟ್ರ ಧ್ವಜವನ್ನು ಮಾರಾಟ ಮಾಡಿತ್ತು.