ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬಳು ತನ್ನ ಹಾಗೂ ಅತ್ತೆ-ಮಾವನ ಮಧ್ಯೆ ಸಂಬಂಧ ಏಕೆ ಹಾಳಾಗಿದೆ ಎಂಬುದನ್ನು ಬರೆದುಕೊಂಡಿದ್ದಾಳೆ. ಆಕೆ ಹಾಗೂ ಅತ್ತೆ-ಮಾವನ ಮಧ್ಯೆ ಬಿರುಕು ಬರಲು ಆಕೆ ಸಾಮಾಜಿಕ ಜಾಲತಾಣ ಕಾರಣವಾಗಿದೆಯಂತೆ. ಅತ್ತೆ-ಮಾವ ತುಂಬ ಒಳ್ಳೆಯವರು ಎಂದು ಪೋಸ್ಟ್ ಶುರು ಮಾಡಿರುವ ಮಹಿಳೆ ನಂತ್ರ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಮೂಡಲು ಕಾರಣವೇನು ಎಂಬುದನ್ನು ವಿವರಿಸಿದ್ದಾಳೆ.
ಸುಮಾರು 70 ವರ್ಷದ ಅತ್ತೆ-ಮಾವ, ಸೊಸೆ ಸಾಮಾಜಿಕ ಜಾಲತಾಣದಲ್ಲಿ ಫ್ರೆಂಡ್ಸ್ ಆಗಿದ್ದರಂತೆ. ಸೊಸೆ ಹಾಕ್ತಿದ್ದ ಎಲ್ಲ ಫೋಟೋಗಳಿಗೆ ಕಮೆಂಟ್ ಮಾಡ್ತಿದ್ದರಂತೆ. ಮಕ್ಕಳ ಫೋಟೋಗಳಿಗೆ ಒಳ್ಳೆ ಕಮೆಂಟ್ ಮಾಡ್ತಿದ್ದ ಅತ್ತೆ ಮಾವ, ಫ್ರೆಂಡ್ಸ್ ಜೊತೆಗಿರುವ ಫೋಟೋಗಳಿಗೆ ಕೆಟ್ಟದಾಗಿ ಕಮೆಂಟ್ ಮಾಡ್ತಿದ್ದರಂತೆ. ಒಂದು ಫೋಟೋಕ್ಕೆ ಅದ್ರ ಮಾವ ಮಾಡಿದ್ದ ಕಮೆಂಟ್ ನೋಡಿ ಸೊಸೆ ಇಬ್ಬರನ್ನು ಅನ್ಫ್ರಂಡ್ ಮಾಡಿದ್ದಾಳೆ. ನಿನ್ನ ಮಕ್ಕಳು ನಿನ್ನ ಈ ಅವತಾರವನ್ನು ನೋಡಲ್ಲವೆಂದು ಭಾವಿಸಿದ್ದೇನೆಂದು ಮಾವ ಕಮೆಂಟ್ ಮಾಡಿದ್ದರಂತೆ.
ನನಗಿನ್ನೂ 45 ವರ್ಷ. 60 ವರ್ಷದವರೆಗೆ ನನಗಿಷ್ಟವಾಗುವ ಬಟ್ಟೆ ಧರಿಸುವ ಸ್ವಾತಂತ್ರ್ಯ ನನಗಿದೆ ಎಂಬುದು ಸೊಸೆ ವಾದ. ಸಾಮಾನ್ಯವಾಗಿ ಯಾರ ಅತ್ತೆ-ಮಾವ ಕೂಡ ಸಾಮಾಜಿಕ ಜಾಲತಾಣದಲ್ಲಿ ಫ್ರೆಂಡ್ ಆಗಿರುವುದಿಲ್ಲ. ಇದೇ ಕಾರಣಕ್ಕೆ ನಾನು ಅನ್ಫ್ರೆಂಡ್ ಮಾಡಿದ್ದೇನೆ. ಆದ್ರೆ ಇದು ಅವ್ರ ಕೋಪಕ್ಕೆ ಕಾರಣವಾಗಿದೆ ಎನ್ನುತ್ತಾಳೆ ಮಹಿಳೆ.
ಈ ಬಗ್ಗೆ ಪತಿ ಮಗನ ಜೊತೆ ಮಾತನಾಡಿದ್ದಾನಂತೆ. ಮಗ ಕೂಡ ಪತ್ನಿ ಪರ ವಹಿಸಿದ್ದಾನಂತೆ. ಸಾಮಾನ್ಯವಾಗಿ ಈ ವಯಸ್ಸಿನಲ್ಲಿ ಆರೋಗ್ಯದ ಬಗ್ಗೆ ಗಮನ ನೀಡಬೇಕು. ಆದ್ರೆ ಅತ್ತೆ ಮಾವ ಯುವಕರಂತೆ ಆಡ್ತಾರೆ ಎನ್ನುತ್ತಾಳೆ ಸೊಸೆ. ಸೊಸೆಗೆ ಫೋನ್ ಮಾಡುವುದು, ಮನೆಗೆ ಕರೆಯುವುದನ್ನೂ ಅವ್ರು ಬಿಟ್ಟಿದ್ದಾರಂತೆ. ಇನ್ನೊಂದು ಫೇಸ್ಬುಕ್ ಅಕೌಂಟ್ ನಲ್ಲಿ ನನ್ನ ಫೋಟೋಗಳನ್ನು ಕಡಿಮೆ ಹಾಕ್ತಿದ್ದು, ಅದ್ರಲ್ಲಿ ಫ್ರೆಂಡ್ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾಳೆ ಸೊಸೆ.