ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಎಲ್ಲ ರಾಜ್ಯಗಳಲ್ಲೂ ಕೊರೊನಾ ಚಿಕಿತ್ಸೆಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಆದ್ರೆ ದೇಶದ ಕೆಲ ರಾಜ್ಯಗಳಲ್ಲಿ ಇನ್ನೂ ಕೊರೊನಾ ಚಿಕಿತ್ಸೆಗೆ ತಯಾರಿ ನಡೆಯುತ್ತಿದೆ ಎಂಬುದು ವಿಷಾದನೀಯ.
ತ್ರಿಪುರಾ ಇದಕ್ಕೆ ಉತ್ತಮ ನಿದರ್ಶನ. ಇಡೀ ರಾಜ್ಯಕ್ಕೆ ಒಂದೇ ಒಂದು ಕೊರೊನಾ ಆಸ್ಪತ್ರೆಯಿದೆ. ಇದನ್ನು ಗಮನಿಸಿರುವ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಮಾಹಿತಿ ಕೇಳಿದೆ. ಸೆಪ್ಟೆಂಬರ್ 18ರೊಳಗೆ ಸರ್ಕಾರ ಕೊರೊನಾಗೆ ನಡೆಸಿದ ತಯಾರಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೈಕೋರ್ಟ್ ಗೆ ನೀಡಬೇಕಿದೆ.
ಅಗರ್ತಲಾ ಮೆಡಿಕಲ್ ಕಾಲೇಜಿಗೆ ಸಂಬಂಧಿಸಿದ ಗೋವಿಂದ್ ವಲ್ಲಬ್ ಪಂತ್ ಆಸ್ಪತ್ರೆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಾದ ನಂತ್ರ ಹೈಕೋರ್ಟ್ ಸ್ವಯಂ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. 2865 ಬೆಡ್ ನ ಆಸ್ಪತ್ರೆ ಕೊರೊನಾ ರೋಗಿಗಳಿಗೆ ಮೀಸಲಿಡಲಾಗಿದೆ. ಆದ್ರೆ ತ್ರಿಪುರಾದಲ್ಲಿ ಸಕ್ರಿಯ ರೋಗಿಗಳ ಸಂಖ್ಯೆ 6800 ಇದೆ.