ಜಿರಳೆ ಕಾಟದಿಂದ ಬೇಸತ್ತಿದ್ದರೆ ಈ ಟಿಪ್ಸ್ ಟ್ರೈ ಮಾಡಿ. ಅಡುಗೆ ಮನೆ ಎಷ್ಟೇ ಚೆನ್ನಾಗಿ ಇಟ್ಟುಕೊಂಡರೂ ಜಿರಳೆಗಳ ಕಾಟ ತಪ್ಪಲ್ಲ. ಯಾವುದೇ ಕ್ಲಿನಿಂಗ್ ಲಿಕ್ವಿಡ್ ತಂದು ಸ್ವಚ್ಛಗೊಳಿಸಿದರೂ ಬೆಳಿಗ್ಗೆದ್ದು ನೋಡುವಾಗ ಜಿರಳೆಗಳು ಓಡಾಡುತ್ತ ಇರುತ್ತದೆ. ಈ ಜಿರಳೆಗಳನ್ನು ಸುಲಭವಾಗಿ ನಿವಾರಿಸುವುದಕ್ಕೆ ಇಲ್ಲೊಂದು ಸುಲಭ ಟಿಪ್ಸ್ ಇದೆ ನೋಡಿ.
ಒಂದು ಬೌಲ್ ಗೆ 8 ಕರ್ಪೂರವನ್ನು ಹಾಕಿ ನಂತರ 4 ಊದಿನಕಡ್ಡಿ ತೆಗೆದುಕೊಂಡು ಅದರ ಮೇಲ್ಭಾಗದಲ್ಲಿರುವ ವಸ್ತುವನ್ನು ತೆಗೆದು ಬೌಲ್ ಗೆ ಹಾಕಿಕೊಳ್ಳಿ. ನಂತರ ಇನ್ನೊಂದು ಬೌಲ್ ಗೆ ½ ಲೋಟ ನೀರು ಹಾಕಿಕೊಂಡು ಅದಕ್ಕೆ ಕರ್ಪೂರವನ್ನು ಸ್ವಲ್ಪ ಜಜ್ಜಿ ಹಾಕಿ, ಊದಿನಕಡ್ಡಿಯ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
15 ನಿಮಿಷಗಳ ಕಾಲ ಇದನ್ನು ಹಾಗೆಯೇ ಇಡಿ. ನಂತರ ಹತ್ತಿಯ ಚಿಕ್ಕ ಚಿಕ್ಕಉಂಡೆ ತೆಗೆದುಕೊಂಡು ಅದನ್ನು ನೀರಿನಲ್ಲಿ ಅದ್ದಿ ಈ ಉಂಡೆಗಳನ್ನು ಜಿರಳೆಗಳು ಜಾಸ್ತಿ ಓಡಾಡುವ ಜಾಗದಲ್ಲಿ ಇಡಿ. ಇದನ್ನು ರಾತ್ರಿ ವೇಳೆ ಮಾಡಿ. ಕೆಲವೇ ದಿನಗಳಲ್ಲಿ ಜಿರಳೆಗಳ ಕಾಟದಿಂದ ನಿಮಗೆ ಮುಕ್ತಿ ಸಿಗುತ್ತದೆ.