ಮಹಾರಾಷ್ಟ್ರದ ಪುಣೆಯಲ್ಲಿ ವಿಚಿತ್ರ ಘಟನೆ ನಡೆದಿದೆ. ಪತ್ನಿ ಮೇಲೆ ಪತಿ ಗಂಭೀರ ಆರೋಪ ಮಾಡಿದ್ದಾನೆ. ವಿಚ್ಛೇದನಕ್ಕಾಗಿ ಪತ್ನಿ ತನ್ನ ಖಾಸಗಿ ಅಂಗವನ್ನು ಕತ್ತರಿಸಲು ಪ್ರಯತ್ನಿಸಿದ್ದಳು ಎಂದು ಪತಿ ಆರೋಪ ಮಾಡಿದ್ದಾನೆ.
ಪೀಡಿತ ಪತಿ, ಪತ್ನಿ ಹಾಗೂ ಆಕೆ ಬಾಯ್ ಫ್ರೆಂಡ್ ವಿರುದ್ಧ ದೂರು ದಾಖಲಿಸಿದ್ದಾನೆ. ಬಾಯ್ ಫ್ರೆಂಡ್ ಜೊತೆ ಸೇರಿ ತನ್ನ ಖಾಸಗಿ ಅಂಗ ಕತ್ತರಿಸಿ ತನ್ನನ್ನು ನಪುಂಸಕ ಮಾಡಲು ಪತ್ನಿ ಮುಂದಾಗಿದ್ದಳು. ನನ್ನನ್ನು ನಪುಂಸಕನನ್ನಾಗಿ ಮಾಡಿ ವಿಚ್ಛೇದನ ಪಡೆಯುವುದು ಆಕೆ ಯೋಜನೆಯಾಗಿತ್ತೆಂದು ಆತ ಹೇಳಿದ್ದಾನೆ.
ಈ ವರ್ಷ ಮಾರ್ಚ್ ನಲ್ಲಿ ಸುಭಾಷ್ ಮದುವೆ ನಡೆದಿತ್ತು. ಲಾಕ್ ಡೌನ್ ಕಾರಣಕ್ಕೆ ಅವರು ಹನಿಮೂನ್ ಗೆ ಹೋಗಿರಲಿಲ್ಲವಂತೆ. ನಂತ್ರ ಮಹಾಬಲೇಶ್ವರಕ್ಕೆ ಹೋದ ಅವರಿಗೆ ಕೌಸ್ತುಬ್ ಎಂಬಾತನ ಭೇಟಿಯಾಗಿತ್ತಂತೆ. ಇಬ್ಬರು ಸ್ನೇಹಿತರಾದ್ರಂತೆ. ಲಾಕ್ ಡೌನ್ ನೆಪ ಹೇಳಿ ಕೌಸ್ತುಬ್, ಸುಭಾಷ್ ಮನೆಯಲ್ಲಿ ವಾಸ ಶುರು ಮಾಡಿದ್ದನಂತೆ.
ಕೌಸ್ತುಬ್ ಮೊಬೈಲ್ ನೋಡಿದ ಸುಭಾಷ್ ದಂಗಾಗಿದ್ದನಂತೆ. ಕೌಸ್ತುಬ್ ಮೊಬೈಲ್ ನಲ್ಲಿ ಪತ್ನಿ ಜೊತೆಗಿರುವ ಅನೇಕ ಫೋಟೋಗಳಿತ್ತಂತೆ. ವಿಚಾರಿಸಿದಾಗ ಕೌಸ್ತುಬ್ ಹಾಗೂ ಸುಭಾಷ್ ಪತ್ನಿ ಇಬ್ಬರು ಪ್ರೇಮಿಗಳು. ಮದುವೆಗೂ ಮುನ್ನವೇ ಇಬ್ಬರ ನಡುವೆ ಸಂಬಂಧವಿತ್ತು. ಜಾತಿ ಕಾರಣಕ್ಕೆ ಮದುವೆಯಾಗಿರಲಿಲ್ಲ ಎಂಬ ವಿಷ್ಯ ಗೊತ್ತಾಯಿತಂತೆ. ಪತ್ನಿ ಹಾಗೂ ಕೌಸ್ತುಬ್ ವಾಟ್ಸಾಪ್ ಚಾಟ್ ನಲ್ಲಿ ಸುಭಾಷ್ ಖಾಸಗಿ ಅಂಗ ಕತ್ತರಿಸುವ ಬಗ್ಗೆ ಮಾತನಾಡಿದ್ದರಂತೆ.