ವೈದ್ಯಕೀಯ ಸೇವೆ ಎನ್ನುವುದು ಇಂದು ಬಲು ದುಬಾರಿಯಾಗಿದೆ. ಬಡಜನತೆ ಅನಾರೋಗ್ಯಕ್ಕೊಳಗಾದ ಸಂದರ್ಭದಲ್ಲಿ ತಮ್ಮ ದುಡಿಮೆಯ ಬಹುಪಾಲನ್ನು ಚಿಕಿತ್ಸಾ ವೆಚ್ಚವಾಗಿ ವ್ಯಯ ಮಾಡಬೇಕಾಗುತ್ತದೆ. ಹೀಗಾಗಿಯೇ ಸರ್ಕಾರಗಳು ವಿವಿಧ ಆರೋಗ್ಯ ಯೋಜನೆಗಳನ್ನು ಜಾರಿಗೆ ತಂದಿವೆ. ಇಷ್ಟಾದರೂ ಸಹ ಸಮರ್ಪಕ ವೈದ್ಯಕೀಯ ಸೇವೆ ಲಭ್ಯವಾಗುತ್ತಿಲ್ಲ.
ಇದರ ಮಧ್ಯೆ ನವದೆಹಲಿಯ ಗುರುದ್ವಾರ ಆಡಳಿತ ಸಮಿತಿ ವತಿಯಿಂದ ದೇಶದಲ್ಲೇ ಅತಿ ದೊಡ್ಡದು ಎನ್ನಲಾದ ಡಯಾಲಿಸಿಸ್ ಕೇಂದ್ರಕ್ಕೆ ಚಾಲನೆ ನೀಡಲಾಗಿದ್ದು, ಇಲ್ಲಿನ ಎಲ್ಲ ಸೇವೆಗಳು ಸಂಪೂರ್ಣ ಉಚಿತವಾಗಿರುವುದು ವಿಶೇಷ. ಸಾಂಕೇತಿಕವಾಗಿ ಕೇವಲ ಐವತ್ತು ರೂಪಾಯಿ ಪಡೆದು ಎಂ.ಆರ್.ಐ. ಸ್ಕ್ಯಾನಿಂಗ್ ಸೇವೆಯನ್ನು ನೀಡಲಾಗುತ್ತದೆ.
BIG NEWS: ಮೀಸಲಾತಿ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್ – ಸರ್ಕಾರದಿಂದ ಮಹತ್ವದ ಕ್ರಮ
ಹರಿಕೃಷ್ಣ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಸಂಶೋಧನಾ ಕೇಂದ್ರದ ಮೂಲಕ ಏಕಕಾಲಕ್ಕೆ 101 ರೋಗಿಗಳಿಗೆ ಹಾಸಿಗೆ ವ್ಯವಸ್ಥೆ ಮಾಡಲಾಗಿದ್ದು, ಸದ್ಯದಲ್ಲೇ ಇದನ್ನು 1000 ಹಾಸಿಗೆಗಳಿಗೆ ಏರಿಕೆ ಮಾಡಲಾಗುತ್ತಿದೆ. ಪ್ರತಿನಿತ್ಯ ಕನಿಷ್ಠ 500 ರೋಗಿಗಳಿಗೆ ಡಯಾಲಿಸಿಸ್ ಸೌಲಭ್ಯ ಒದಗಿಸುವ ಗುರಿಯನ್ನು ಹೊಂದಲಾಗಿದ್ದು, ಬಡ ರೋಗಿ ಹಾಗೂ ಅವರ ಕುಟುಂಬಕ್ಕೆ ವಾಸ್ತವ್ಯದ ಜೊತೆಗೆ ಉಚಿತ ಆಹಾರ ನೀಡಲಾಗುತ್ತದೆ. ರೋಗಿಗಳು ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಂಡು ಈ ಕೇಂದ್ರದ ಸೇವೆಯನ್ನು ಪಡೆಯಬಹುದಾಗಿದೆ.