ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರ ಆಟಾಟೋಪದ ಬಳಿಕ ಭಾರತದಲ್ಲಿ ಚೀನಾ ವಿರುದ್ಧ ಆಕ್ರೋಶ ಭುಗಿಲೆದ್ದಿದೆಯಲ್ಲದೆ ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ಕರೆ ನೀಡಲಾಗುತ್ತಿದೆ. ಇದರಿಂದಾಗಿ ಚೀನಾದಲ್ಲಿ ತಯಾರಾದ ವಸ್ತುಗಳನ್ನು ಭಾರತೀಯರು ಖರೀದಿಸುತ್ತಿಲ್ಲ.
ಇದರ ಜೊತೆಗೆ ಕೇಂದ್ರ ಸರ್ಕಾರ ಚೀನಾದ 59 ಅಪ್ ಗಳನ್ನು ನಿಷೇಧಿಸುವ ಮೂಲಕ ಆರ್ಥಿಕತೆಗೆ ಪೆಟ್ಟು ನೀಡಿದೆ. ಅಲ್ಲದೆ ಭಾರತೀಯರು ಚೀನಾ ಉತ್ಪನ್ನಗಳನ್ನು ವಿರೋಧಿಸುತ್ತಿರುವ ಕಾರಣ ಚೀನಾ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ.
ಆದರೆ ಚೀನಾ ಉತ್ಪನ್ನಗಳನ್ನು ಗುರುತಿಸಲು ಒಮ್ಮೊಮ್ಮೆ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಕೇಂದ್ರ ಸರ್ಕಾರ, ಇ ಮಾರ್ಕೆಟಿಂಗ್ ಕಂಪನಿಗಳು ತಾವು ಮಾರಾಟ ಮಾಡುವ ವಸ್ತುವನ್ನು ತಯಾರಿಸಿದ ದೇಶದ ಹೆಸರನ್ನು ನಮೂದಿಸುವುದು ಕಡ್ಡಾಯ ಎಂದು ತಿಳಿಸಿದೆ. ದೆಹಲಿ ಹೈಕೋರ್ಟ್ ಗೂ ಸಹ ಕೇಂದ್ರ ಸರ್ಕಾರದಿಂದ ಈ ಕುರಿತು ಮಾಹಿತಿ ನೀಡಲಾಗಿದೆ.