ಉತ್ತರ ಪ್ರದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಪೈಶಾಚಿಕ ಪ್ರಕರಣಗಳು ಭಯ ಹುಟ್ಟಿಸುತ್ತಿವೆ. ಉತ್ತರ ಪ್ರದೇಶದಲ್ಲಿ ಕಳೆದ 5 ವರ್ಷಗಳಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ನಿರಂತರ ಅಪಹರಣ ಹಾಗೂ ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಅಂಕಿ ಅಂಶಗಳ ಪ್ರಕಾರ ಪ್ರತಿ 5 ಗಂಟೆಗಳಿಗೊಮ್ಮೆ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಎರಡು ಗಂಟೆಗೊಮ್ಮೆ ಅಪ್ರಾಪ್ತ ಬಾಲಕಿ ಅಪಹರಣ ನಡೆಯುತ್ತಿದೆ.
ಎರಡು ದಿನಗಳಿಗೊಮ್ಮೆ ಬಾಲಕಿ ಹತ್ಯೆ ನಡೆಯುತ್ತಿದೆ. ಯುಪಿಯಲ್ಲಿ ಆದಿತ್ಯನಾಥ್ ಸರ್ಕಾರ ಅಪರಾಧ ತಡೆಯಲು ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿದೆ. ಎನ್ಕೌಂಟರ್ ಹೆಚ್ಚಾಗ್ತಿದೆ. ಆದ್ರೆ ಅಪರಾಧ ಪ್ರಕರಣಗಳು ಮಾತ್ರ ನಿಲ್ತಿಲ್ಲ.
ಯುಪಿಯಲ್ಲಿ ಜನವರಿ 1, 2015ರಿಂದ ಅಕ್ಟೋಬರ್ 30, 2019 ರವರೆಗೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರನ್ನು ಅಪಹರಿಸಿದ 25, 615 ಪ್ರಕರಣಗಳು ವರದಿಯಾಗಿವೆ. 9703 ಬಾಲಕಿಯರು ಅತ್ಯಾಚಾರಕ್ಕೆ ಬಲಿಯಾಗಿದ್ದಾರೆ. ಕಳೆದ 5 ವರ್ಷಗಳಲ್ಲಿ 988 ಬಾಲಕಿಯರನ್ನು ಹತ್ಯೆ ಮಾಡಲಾಗಿದೆ. ಆದ್ರೆ ಇದ್ರಲ್ಲಿ ಅನೇಕ ಪ್ರಕರಣದಲ್ಲಿ ಪೀಡಿತರಿಗೆ ನ್ಯಾಯ ಸಿಕ್ಕಿಲ್ಲ. 2 ಸಾವಿರಕ್ಕಿಂತ ಕಡಿಮೆ ಮಂದಿಗೆ ಶಿಕ್ಷೆಯಾಗಿದೆ.