ನವೆಂಬರ್ ತಿಂಗಳು ಮರುಭೂಮಿಗಳಿಗೆ ಪ್ರವಾಸ ಹೋಗಲು ಬೆಸ್ಟ್ ಟೈಮ್. ಭಾರತದಲ್ಲಿರೋ ಕೆಲವು ಸುಂದರ ತಾಣಗಳಿಗೆ ಈ ಸಮಯದಲ್ಲೇ ಭೇಟಿ ನೀಡಬೇಕು. ಒಂಟಿಯಾಗಿ, ಜಂಟಿಯಾಗಿ ಅಥವಾ ಫ್ಯಾಮಿಲಿ ಟ್ರಿಪ್ ಗೆ ಕೂಡ ಈ ಪ್ಲೇಸ್ ಗಳು ಅತ್ಯುತ್ತಮವಾಗಿರುತ್ತವೆ. ಆ ಸ್ಥಳಗಳು ಯಾವುವು ನೋಡೋಣ.
ರಾಜಸ್ತಾನದ ಪುಷ್ಕರ್ : ಈ ಸ್ಥಳ ಥಾರ್ ಮರುಭೂಮಿಯ ಗಡಿಯಲ್ಲಿದೆ. ಪುಷ್ಕರ್ ಅನ್ನೋದು ಒಂದು ಪವಿತ್ರ ನಗರಿ. ಭಾರತದಲ್ಲಿ ಬ್ರಹ್ಮ ದೇವಾಲಯ ಹೊಂದಿರೋ ಏಕೈಕ ಸ್ಥಳವಿದು. ಸ್ನೇಹಮಯ ವಾತಾವರಣ, ಮೈ ಜುಮ್ಮೆನ್ನಿಸುವಂತಹ ಘಟ್ಟಗಳು ಇವನ್ನೆಲ್ಲ ಕಣ್ತುಂಬಿಕೊಳ್ಳಲು ಇದು ಸರಿಯಾದ ಸಮಯ.
ಮೇಘಾಲಯದ ಗಾರೊ ಹಿಲ್ಸ್ : ಕಾಡು ಸಸ್ಯಗಳು ಮತ್ತು ಪ್ರಾಣಿಗಳು ವಾಸಿಸ್ತಾ ಇರೋ ವಿಶ್ವದ ಅತ್ಯಂತ ತೇವವಾದ ಸ್ಥಳದಲ್ಲಿ ಇದು ಕೂಡ ಒಂದು. ಬುಡಕಟ್ಟು ನಿವಾಸಿಗಳು ಇದನ್ನು ಪರಿಸರ ಸ್ನೇಹಿಯಾಗಿಯೇ ಉಳಿಸಿಕೊಂಡು ಬಂದಿದ್ದಾರೆ.
ಗುಜರಾತ್ ನ ಗ್ರೇಟ್ ರನ್ : ಕಛ್ ನಲ್ಲಿರೋ ಗ್ರೇಟ್ ರನ್ ಥಾರ್ ಮರುಭೂಮಿಗೆ ಸಂಪರ್ಕ ಕಲ್ಪಿಸುತ್ತದೆ. ನವೆಂಬರ್ ತಿಂಗಳಿನಲ್ಲಿ ಇಲ್ಲಿ ರನ್ನುತ್ಸವ ಎಂಬ ಹಬ್ಬವೂ ನಡೆಯುತ್ತದೆ. ಬಿಳಿ ಉಪ್ಪು ಮತ್ತು ಜವುಗನ್ನು ಹೊಂದಿರೋ ಈ ಮರುಭೂಮಿಗೆ ಒಂದು ವಿಸಿಟ್ ಹಾಕಲೇಬೇಕು.
ಕರ್ನಾಟಕದ ಕೂರ್ಗ್ : ಹಚ್ಚಹಸಿರಿನ ತಾಣ ಕೂರ್ಗ್. ಸ್ವರ್ಗವೇ ಧರೆಗಿಳಿದಂತೆ ಭಾಸವಾಗುವ ಪ್ರಕೃತಿ ಸೌಂದರ್ಯ ಇಲ್ಲಿದೆ. ನವೆಂಬರ್ ನಲ್ಲಿ ಈ ತಾಣ ಇನ್ನಷ್ಟು ಕಳೆಗಟ್ಟುತ್ತದೆ.
ಉತ್ತರಾಖಂಡ್ ನ ಅಲ್ಮೋರಾ: ಇಲ್ಲಿ ಸಾಂಸ್ಕೃತಿಕ ವೈವಿದ್ಯತೆಯಿದೆ. ಮೋಡಿ ಮಾಡುವ ತಾಣಗಳಿವೆ. ಗಿರಿಧಾಮಗಳ ಸೌಂದರ್ಯವನ್ನಂತೂ ಸವಿಯಲು ಎರಡು ಕಣ್ಣುಗಳು ಸಾಲದು. ವಿಶಿಷ್ಟವಾದ ದೇವಾಲಯಗಳು ಸಹ ಅಲ್ಮೋರಾದಲ್ಲಿವೆ.
ಕೇರಳದ ವರ್ಕಳ : ಇದೊಂದು ಬೀಚ್. ಇಲ್ಲಿಗೆ ಬರೋ ಪ್ರವಾಸಿಗರ ಸಂಖ್ಯೆ ಕಡಿಮೆ. ನವೆಂಬರ್ ನಲ್ಲಿ ವರ್ಕಳದಲ್ಲಿ ಸೆಖೆ ಹೆಚ್ಚಾಗಿರೋದ್ರಿಂದ ಇದೇ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಿದ್ರೆ ಎಂಜಾಯ್ ಮಾಡಬಹುದು.