ಕೊರೊನಾ ಸಾಂಕ್ರಮಿಕ ರೋಗದ ಕಾರಣಕ್ಕೆ ದೇಶದಲ್ಲಿ ಪ್ರಸ್ತುತ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ, ಭಾರತದ ದೇಶೀಯ ಒಟ್ಟು ಉತ್ಪನ್ನ ದರ (ಜಿಡಿಪಿ) ಕುರಿತು ಹೇಳಿಕೆಯೊಂದನ್ನು ನೀಡಿದ್ದರು.
ಕೊರೊನಾ ಸಾಂಕ್ರಮಿಕದ ಹಿನ್ನೆಲೆಯಲ್ಲಿ ದೇಶದ ಜಿಡಿಪಿ ದರ ಶೇಕಡಾ 5 ರಷ್ಟು ಕುಸಿಯುವ ನಿರೀಕ್ಷೆಯಿದ್ದು, ಸ್ವಾತಂತ್ರ್ಯ ಬಂದ ನಂತರ ಅತ್ಯಂತ ಕನಿಷ್ಠ ಮಟ್ಟಕ್ಕೆ ತಲುಪುವ ಆತಂಕವಿದೆ ಎಂದು ನಾರಾಯಣ ಮೂರ್ತಿ ಸಂದರ್ಶನವೊಂದರಲ್ಲಿ ಹೇಳಿದ್ದರು.
ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇನ್ಫೋಸಿಸ್ ನಾರಾಯಣಮೂರ್ತಿಯವರ ಹೇಳಿಕೆಯ ಸ್ಕ್ರೀನ್ ಶಾಟ್ ನ್ನು ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಹಾಕಿ ‘ಮೋದಿ ಹೈ ತೋ ಮುಮ್ಕೀನ್ ಹೈ’ ಎಂದು ಲೇವಡಿ ಮಾಡಿದ್ದಾರೆ.