ಖಗೋಳದಲ್ಲಿ ಆಗಾಗ ಆಶ್ಚರ್ಯ ಚಕಿತಗಳು ನಡೆಯುತ್ತಲೇ ಇರುತ್ತವೆ. ಅಪರೂಪವಾದಂತಹ ಘಟನೆಗಳ ಬಗ್ಗೆ ಖಗೋಳ ತಜ್ಞರು ತಮ್ಮದೇ ಆದ ವಿವರಣೆ ನೀಡುತ್ತಾರೆ. ಇದೀಗ ಇಂತಹದ್ದೇ ಅಪರೂಪವಾದ ಘಟನೆಯೊಂದು ಇಂದು ಖಗೋಳದಲ್ಲಿ ನಡೆಯಲಿದೆ. ಅದೇ ಬ್ಲೂಮೂನ್.
ಹೌದು, ಅಪರೂಪದಲ್ಲಿ ಅಪರೂಪವಾದ ಬ್ಲೂಮೂನ್ ದರ್ಶನ ಇಂದು ಆಗಲಿದೆ. ಅಕ್ಟೋಬರ್‌ನಲ್ಲಿ ಎರಡು ಹುಣ್ಣಿಮೆ ಬಂದಿವೆ. ಈ ಬ್ಲೂಮೂನ್ 2007, 2018ರಲ್ಲಿ ಗೋಚರವಾಗಿತ್ತು. ಇದೀಗ ಮತ್ತೊಮ್ಮೆ ಇಂತಹ ಅಪರೂಪದ ಚಂದ್ರ ದರ್ಶನವಾಗುತ್ತಿದೆ. ಇನ್ನು ಮುಂದಿನ ಬ್ಲೂಮೂನ್ ದರ್ಶನ 2050 ರಲ್ಲಿ ಎಂದು ಹೇಳಲಾಗುತ್ತಿದೆ.
ಒಂದೇ ತಿಂಗಳಿನಲ್ಲಿ ಎರಡು ಹುಣ್ಣಿಮೆ ಬಂದಿರೋದ್ರಿಂದ ಇದನ್ನು ಬ್ಲೂಮೂನ್ ಎನ್ನುತ್ತಾರೆ. ಈ ಹುಣ್ಣಿಮೆ ದಿನ ಚಂದ್ರ ಗಾತ್ರದಲ್ಲಿ ಕಡಿಮೆ ಹಾಗೂ ಪ್ರಕಾಶಮಾನದಲ್ಲೂ ಕಡಿಮೆಯಾಗಿ ಗೋಚರಿಸುತ್ತಾನೆ ಅಂತಿದ್ದಾರೆ ಖಗೋಳ ತಜ್ಞರು. ಇನ್ನು ಒಂದೇ ತಿಂಗಳಲ್ಲಿ ಎರಡು ಹುಣ್ಣಿಮೆ ಬಂದಿರೋದ್ರಿಂದ ಎಲ್ಲೋ ಒಂದು ಕಡೆ ಭೂಮಂಡಲಕ್ಕೆ ಮತ್ತೆ ಕಂಟಕ ಎದುರಾಗುತ್ತಾ ಅನ್ನೋ ಅನುಮಾನ ಹಲವರದ್ದು.