1975ರ ದಿನಗಳು ಇಂದಿನ ಪೀಳಿಗೆ ನೋಡಿರದೇ ಇದ್ದರೂ ಯಾರೂ ಮರೆಯುವಂತಿಲ್ಲ. ಆಗ ಅಧಿಕಾರದಲ್ಲಿದ್ದ ಇಂದಿರಾಗಾಂಧಿ ಸರ್ಕಾರದ ಒಂದು ನಿಲುವು ಅದೆಷ್ಟೋ ಜನರಿಗೆ ನುಂಗಲಾರದ ತುತ್ತಾಗಿತ್ತು. ಇಂದಿರಾ ಗಾಂಧಿ ಸರ್ಕಾರ ಜಾರಿ ಮಾಡಿದ್ದ ತುರ್ತು ಪರಿಸ್ಥಿತಿ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಅಜ್ಜಿಯೊಬ್ಬರು ಸುಪ್ರೀಂ ಕೋರ್ಟ್ ಗೆ ಹೋಗಿದ್ದಾರೆ.
ಹೌದು, ತುರ್ತು ಪರಿಸ್ಥಿತಿಯನ್ನು ಪ್ರಶ್ನಿಸಿ 94ರ ವೃದ್ಧೆಯೊಬ್ಬರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. 2017ರಲ್ಲಿ ಐವರು ಜಡ್ಜ್ ಹೊರಡಿಸಿದ್ದ ಆದೇಶದ ಮೇಲೆ ಈ ವೃದ್ದೆ ಅರ್ಜಿ ಹಾಕಿದ್ದಾರೆ. ಅಲ್ಲದೆ 25 ಕೋಟಿ ಪರಿಹಾರ ಕೇಳಿದ್ದಾರೆ ಎನ್ನಲಾಗಿದೆ.
ತುರ್ತು ಪರಿಸ್ಥಿತಿ ಜಾರಿಯಾದ ಮೇಲೆ ನಮ್ಮ ಜೀವನ ಬೀದಿಗೆ ಬಂತು. ಆಗ ಇದ್ದ ಸರ್ಕಾರಿ ಅಧಿಕಾರಿಗಳು ನಮ್ಮ ಕುಟುಂಬ ಹಾಗೂ ವ್ಯವಹಾರವನ್ನು ಟಾರ್ಗೆಟ್ ಮಾಡಿದರು. ನಮ್ಮ ಆಸ್ತಿಯನ್ನು ಸೀಜ್ ಮಾಡಿದರು. ನಮ್ಮ ಪತಿ ಸಾವನ್ನಪ್ಪಿದರು. ಅಂದಿನಿಂದಲೂ ಒಬ್ಬಂಟಿಯಾಗಿ ಕಷ್ಟಪಡುತ್ತಾ ಜೀವನ ಸಾಗಿಸುತ್ತಿದ್ದೇನೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ ಈ ಅಜ್ಜಿ. ಇನ್ನು ತುರ್ತು ಪರಿಸ್ಥಿತಿ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದೂ ಪ್ರಶ್ನೆ ಮಾಡಿದ್ದಾರೆ.