ಜರ್ಮನಿಯ ವಿಮಾನಯಾನ ಕಂಪನಿ ಲುಫ್ತಾನ್ಸಾ ಏರ್ಲೈನ್ಸ್ ((Lufthansa Airlines) ಆಗಸ್ಟ್ 13 ರಿಂದ ಫ್ರಾಂಕ್ಫರ್ಟ್ನಿಂದ ದೆಹಲಿ, ಮುಂಬೈ ಮತ್ತು ಬೆಂಗಳೂರಿಗೆ ವಿಮಾನ ಸೇವೆಗಳನ್ನು ಪ್ರಾರಂಭಿಸಲಿದೆ. ಇದಕ್ಕಾಗಿ ಉಭಯ ಸರ್ಕಾರಗಳ ನಡುವೆ ದ್ವಿಪಕ್ಷೀಯ ಒಪ್ಪಂದ ನಡೆದಿದೆ.
ಮ್ಯೂನಿಚ್ನಿಂದ ದೆಹಲಿ ಮಾರ್ಗದಲ್ಲಿ ಕಂಪನಿಯು ತನ್ನ ಸೇವೆಗಳನ್ನು ಶುರು ಮಾಡ್ತಿದೆ. ಲುಫ್ತಾನ್ಸಾ ಹೊರಡಿಸಿದ ಹೇಳಿಕೆಯ ಪ್ರಕಾರ, ಕಳೆದ ಹಲವು ತಿಂಗಳುಗಳಿಂದ ಫ್ರಾಂಕ್ಫರ್ಟ್ ಮತ್ತು ಮ್ಯೂನಿಚ್ನಿಂದ ಬೇರೆ ದೇಶಗಳಿಗೆ ವಿಮಾನ ಹಾರಾಟ ಶುರುವಾಗಿದೆ. ಭಾರತಕ್ಕೆ ಆಗಸ್ಟ್ 13 ರಿಂದ ಸೇವೆ ಪುನರಾರಂಭಗೊಳ್ಳಲಿದೆ.
ಭಾರತ-ಫ್ರಾನ್ಸ್ ವಿಮಾನ ಹಾರಾಟ ಈಗಾಗಲೇ ಶುರುವಾಗಿದೆ. ದೇಶದಲ್ಲಿ ಲಾಕ್ಡೌನ್ ಘೋಷಣೆಯಾದ ನಂತರ ಮಾರ್ಚ್ನಿಂದ ಅಂತರರಾಷ್ಟ್ರೀಯ ವಿಮಾನಯಾನಗಳ ಹಾರಾಟವನ್ನು ನಿಷೇಧಿಸಲಾಗಿದೆ. ಆದ್ರೆ ವಿದೇಶದಲ್ಲಿ ಸಿಕ್ಕಿಬಿದ್ದ ಭಾರತೀಯರನ್ನು ವಾಪಾಸು ತರಲು ಸರ್ಕಾರ ವಂದೇ ಭಾರತ್ ಮಿಷನ್ ಶುರು ಮಾಡಿತ್ತು.