ಡಿಸೆಂಬರ್ ಅಂತ್ಯ ಹಾಗೂ ಜನವರಿ ಮೊದಲ ವಾರದಲ್ಲೇ ಕೊರೊನಾ ವಿರುದ್ಧದ ಲಸಿಕೆ ಸಿಗಲಿದೆ ಎಂಬ ಭರವಸೆ ಎಲ್ಲರಲ್ಲೂ ಇದೆ. ಈಗಾಗಲೇ ಲಸಿಕೆಯನ್ನು ಸ್ಟೋರೇಜ್ ಮಾಡಲು ಆಯಾಯ ರಾಜ್ಯಗಳ ಆರೋಗ್ಯಾಧಿಕಾರಿಗಳಿಗೆ ತಿಳಿಸಲಾಗಿದೆ.
ಇದರ ಮಧ್ಯೆ ಆಸ್ಟ್ರಾಜೆನಿಕಾ-ಆಕ್ಸ್ ಫರ್ಡ್ ಸಂಸ್ಥೆ ತಯಾರಿಸುತ್ತಿದ್ದ ಕೋವಿಡ್ ಲಸಿಕೆ ಪರಿಣಾಮಕಾರಿ ಎಂದು ಹೇಳಲಾಗಿತ್ತು. ಆದರೆ ಇದೀಗ ಈ ಸಂಸ್ಥೆ ವಿವಾದಕ್ಕೆ ಗುರಿಯಾಗಿದೆ.
ಹೌದು, ಇತ್ತೀಚೆಗೆ ಈ ಸಂಸ್ಥೆ ನಡೆಸಿದ್ದ ಸುದ್ದಿಗೋಷ್ಟಿಯಲ್ಲಿ ಒಂದಿಷ್ಟು ವಿಚಾರಗಳನ್ನು ಮರೆ ಮಾಚಲಾಗಿದೆ ಎಂದು ಹೇಳಲಾಗುತ್ತಿದೆ. ಮಾನವ ಪ್ರಯೋಗದ ವೇಳೆ ಕೆಲವೊಂದು ತಪ್ಪುಗಳು ನಡೆದಿವೆ ಎನ್ನಲಾಗಿದೆ. ಪ್ರಮಾದಗಳು ಇದ್ದರೂ ಸಂಸ್ಥೆ ಮಾತ್ರ ತಮ್ಮ ಲಸಿಕೆಯನ್ನು ಜನರ ಮುಂದಿಟ್ಟಿದೆ ಎಂಬ ಆರೋಪ ಕೇಳಿ ಬಂದಿದೆ.
ಇನ್ನು ಹಿರಿಯ ನಾಗರೀಕರ ಮೇಲೆ ಈ ಲಸಿಕೆ ಹೆಚ್ಚು ಪರಿಣಾಮ ಬೀರಿದೆ ಎಂದು ಹೇಳಿದೆ ಸಂಸ್ಥೆ. ಆದರೆ ಇಲ್ಲಿ ಸ್ಯಾಂಪಲ್ ಸಂಖ್ಯೆ ಕಡಿಮೆ ಇದೆ. ಹೀಗಿದ್ದಾಗ ಇದು ಎಷ್ಟರ ಮಟ್ಟಿನ ಪರಿಣಾಮಕಾರಿ ಎಂದು ಪ್ರಶ್ನಿಸಲಾಗುತ್ತಿದೆ.
ಇದರ ಜೊತೆಗೆ ಮಾನವ ಪ್ರಯೋಗದ ವೇಳೆಯ ಅಂಕಿ ಅಂಶಗಳಿಗೂ ಹಾಗೂ ಜನರ ಮುಂದೆ ಸಂಸ್ಥೆ ನೀಡಿದ್ದ ಅಂಕಿ ಅಂಶಗಳಲ್ಲಿ ವ್ಯತ್ಯಾಸ ಇದೆ ಎಂದು ಹೇಳಲಾಗುತ್ತಿದೆ. ಒಟ್ನಲ್ಲಿ ಪರಿಣಾಮಕಾರಿ ಲಸಿಕೆ ಎಂದು ಬಿಂಬಿತವಾಗಿದ್ದ ಈ ಲಸಿಕೆ ಬಿಡುಗಡೆಗೂ ಮುನ್ನವೇ ವಿವಾದ ಮಾಡಿಕೊಳ್ತಾ ಎಂಬ ಅನುಮಾನ ಕಾಡತೊಡಗಿದೆ.