ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ದೇಶದಲ್ಲಿ ಇಲ್ಲಿಯವರೆಗೆ ಒಟ್ಟು 2,07,615 ಆಗಿದೆ. ನಿನ್ನೆ ಒಂದೇ ದಿನದಲ್ಲಿ 8909 ಪ್ರಕರಣ ಪತ್ತೆಯಾಗಿವೆ. ಇನ್ನು ನಿನ್ನೆ ಒಂದೇ ದಿನ ಸೋಂಕಿನಿಂದ 217 ಸಾವು ಸಂಭವಿಸಿವೆ. ಇದರ ಜೊತೆಗೆ ಮತ್ತೊಂದು ಆಘಾತಕಾರಿ ಅಂಶ ಹೊರ ಬಿದ್ದಿದೆ.
ಹೌದು, ಜೂನ್ ಎರಡು ಅಥವಾ ಮೂರನೇ ವಾರದ ಬಳಿಕ ಭಾರತದಲ್ಲಿ ದಿನವೊಂದಕ್ಕೆ 15 ಸಾವಿರ ಪಾಸಿಟಿವ್ ಕೇಸ್ ಆಗುತ್ತವೆ ಎಂದು ಚೀನಾದ ಲಾಂಝಾಹು ವಿಶ್ವವಿದ್ಯಾಲಯದ ತಜ್ಞರ ವರದಿ ಹೇಳಿದೆ. ನಿಜಕ್ಕೂ ಈ ವರದಿ ಜನತೆಯಲ್ಲಿ ಆತಂಕ ಮೂಡಿಸುತ್ತಿರೋದಂತೂ ಸತ್ಯ.
ಇನ್ನು ನಮ್ಮ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಕೂಡ ಹೆಚ್ಚಾಗಿದೆ. ನಿನ್ನೆ ಒಂದೇ ದಿನದಲ್ಲಿ 267 ಮಂದಿಗೆ ಸೋಂಕು ತಗುಲಿದೆ. ಇನ್ನು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 4063 ಕ್ಕೆ ಏರಿಕೆಯಾಗಿದೆ. ನಮ್ಮ ರಾಜ್ಯದಲ್ಲಿ ಸೋಂಕಿನಿಂದ ಈವರೆಗೆ 53 ಮಂದಿ ಮೃತಪಟ್ಟಿದ್ದಾರೆ.