ಕೊರೊನಾ ಸೋಂಕಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಕೊರೊನಾಕ್ಕೆ ಬಲಿಯಾದವರ ಅಂತ್ಯಸಂಸ್ಕಾರ ಸರಿಯಾಗಿ ನಡೆಯುತ್ತಿಲ್ಲ. ಇದಕ್ಕೆ ಈಗಾಗಲೇ ಸಾಕಷ್ಟು ಪ್ರಕರಣಗಳು ಸಾಕ್ಷಿಯಾಗಿವೆ. ಈಗ ತಮಿಳುನಾಡಿನಲ್ಲಿ ಇನ್ನೊಂದು ಘಟನೆ ನಡೆದಿದೆ.
ನಿಜಾಮಾಬಾದ್ ನಗರದಲ್ಲಿ ಕೊರೊನಾ ಸೋಂಕಿತನ ಮೃತ ದೇಹವನ್ನು ಆಟೋದಲ್ಲಿ ಸ್ಮಶಾನಕ್ಕೆ ಕೊಂಡೊಯ್ಯಲಾಯಿತು. ಅತ್ಯಂತ ಆಘಾತಕಾರಿ ಸಂಗತಿಯೆಂದರೆ ಆಸ್ಪತ್ರೆಯ ಆಡಳಿತದ ಮೇಲ್ವಿಚಾರಣೆಯಿಲ್ಲದೆ ಈ ಶವಗಳನ್ನು ತೆಗೆದುಕೊಳ್ಳಲಾಗಿದೆ. ಆಸ್ಪತ್ರೆಯು 50 ವರ್ಷದ ವ್ಯಕ್ತಿಯ ಮೃತ ದೇಹವನ್ನು ಅಂತಿಮ ಸಂಸ್ಕಾರಕ್ಕೆ ಕುಟುಂಬಕ್ಕೆ ಹಸ್ತಾಂತರಿಸಿದೆ. ಆಸ್ಪತ್ರೆಯು ಮೃತರ ಸಂಬಂಧಿಕರಿಗೆ ಆಂಬ್ಯುಲೆನ್ಸ್ ಸೌಲಭ್ಯವನ್ನೂ ನೀಡಿಲ್ಲ.
ಎಎನ್‌ಐ ಜೊತೆ ಮಾತನಾಡಿದ ನಿಜಾಮಾಬಾದ್ ಸರ್ಕಾರಿ ಆಸ್ಪತ್ರೆಯ ನಾಗೇಶ್ವರ ರಾವ್, ಮೃತರ ಕುಟುಂಬವು ಆಸ್ಪತ್ರೆಯಲ್ಲಿಯೇ ಕೆಲಸ ಮಾಡುತ್ತದೆ ಮತ್ತು ಅವರ ಕೋರಿಕೆಯ ಮೇರೆಗೆ ಮೃತ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದಿದ್ದಾರೆ.