ಅಯೋಧ್ಯೆಯ ಸರಯೂ ನದಿಯ ತಟದಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿರುವ ವಿಷಯ ಎಲ್ಲರಿಗೂ ಗೊತ್ತು. ಆದರೆ ಅದರೊಂದಿಗೆ ಅಯೋಧ್ಯೆಯಲ್ಲಿರುವ ಇತರ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ತಿಳಿದುಕೊಳ್ಳೋಣ.
ಹನುಮಾನ್ ಗರ್ಹಿ ಅಯೋಧ್ಯೆಯಲ್ಲಿರುವ ಹನುಮಾನ್ ದೇವಾಲಯ. 70ಕ್ಕೂ ಅಧಿಕ ಮೆಟ್ಟಿಲುಗಳನ್ನು ದಾಟಿ ಇಲ್ಲಿಗೆ ತಲುಪಬಹುದು. ರಾಮ ಮಂದಿರ ವೀಕ್ಷಣೆಗೆ ಮೊದಲು ಈ ದೇಗುಲ ದರ್ಶನ ಮಾಡಬೇಕೆಂಬ ಅಲಿಖಿತ ನಿಯಮವಿದೆ.
ಗುಲಾಬ್ ಬರಿ ಎಂಬ ಸಮಾಧಿ ತಾಣವು ಗುಲಾಬಿ ಉದ್ಯಾನದ ಮೂಲಕ ಪ್ರವಾಸಿಗರನ್ನು ಸೆಳೆಯುತ್ತದೆ. ಇದರ ಆವರಣದಲ್ಲಿ ಆಕರ್ಷಕ ಗೋಡೆಗಳಿವೆ.
ತ್ರೇತ ಕೆ ಠಾಕೂರ್ ಎಂಬ ಇನ್ನೊಂದು ಸ್ಥಳದಲ್ಲಿ ಶ್ರೀ ರಾಮಚಂದ್ರನು ಅಶ್ವಮೇಧ ಹೋಮ ಮಾಡಿದನೆಂದು ಹೇಳಲಾಗುತ್ತದೆ. ಇಲ್ಲಿ ರಾಮ, ಸೀತೆ, ಲಕ್ಷ್ಮಣ, ಭರತ, ಶತ್ರುಘ್ನ ಮೊದಲಾದವರ ವಿಗ್ರಹಗಳನ್ನು ಒಳಗೊಂಡ ದೇವಾಲಯವಿದೆ.
ಸೀತಾದೇವಿಯ ಅಡುಗೆ ಮನೆ ಎನ್ನಲಾದ ಸೀತಾ ಕಿ ರಸೋಯಿ ಇದೆ. ಅಲ್ಲದೆ ರಾಮ್ ಕತಾ ಪಾರ್ಕ್, ಪರ್ಲ್ ಪ್ಯಾಲೆಸ್ ಗಳಿವೆ.