ಕೊರೊನಾ ಹೆಮ್ಮಾರಿಯಿಂದಾಗಿ ಅದ್ಧೂರಿಯಾಗಿ ನಡೆಯಬೇಕಾದ ಮಹೋತ್ಸವಗಳು, ಉತ್ಸವಗಳು ಸರಳವಾಗಿ ನಡೆಯುತ್ತಿವೆ.
ಆದರೆ ಅಯೋಧ್ಯೆಯಲ್ಲಿ ನಡೆಯುವ ದೀಪೋತ್ಸವದ ಕಥೆ ಹಾಗಲ್ಲ. ಕೊರೊನಾ ನಡುವೆಯೂ ಅದ್ಧೂರಿಯಾಗಿ ದೀಪೋತ್ಸವ ನಡೆಯಲಿದೆ. ಭಕ್ತರು ಇಲ್ಲದೇ ಇದ್ದರೂ ಅದ್ಧೂರಿ ದೀಪೋತ್ಸವಕ್ಕೆ ಸಾಕ್ಷಿಯಾಗಲಿದೆ ಅಯೋಧ್ಯೆ.
ಹೌದು, ಕೊರೊನಾ ಇರೋದ್ರಿಂದ ಹೆಚ್ಚು ಜನ ಸೇರುವಂತಿಲ್ಲ. ಹೀಗಾಗಿ ಜನ ಇಲ್ಲದೇ ಇದ್ದರೂ ಅದ್ಧೂರಿ ದೀಪೋತ್ಸವ ಮಾಡಬೇಕೆಂಬ ನಿರ್ಧಾರ ಮಾಡಿದೆ ಯೋಗಿ ಆದಿತ್ಯನಾಥ್ ಸರ್ಕಾರ. ಈ ಕುರಿತು ಸಿಎಂ ಆದಿತ್ಯನಾಥ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಹಾಗೆಯೇ ಈ ಬಾರಿ ದೀಪಾವಳಿ ಆಚರಣೆಗಾಗಿ ವರ್ಚುಯಲ್ ದೀಪೋತ್ಸವ ನಡೆಸುವುದಕ್ಕೆ ಚಿಂತನೆ ನಡೆದಿದೆ. ವರ್ಚುಯಲ್ ಮೂಲಕ ದೀಪೋತ್ಸವವನ್ನು ದೇಶದ ಜನತೆ ನೋಡುವಂತಾಗಲಿ ಅನ್ನೋದು ಯೋಗಿ ಆದಿತ್ಯಾನಾಥ್ ಆಶಯ.
2017 ರಿಂದ ದೀಪೋತ್ಸವ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಈ ವರ್ಷ ರಾಮಜನ್ಮಭೂಮಿಯ ಶಿಲಾನ್ಯಾಸದ ನಂತರ ಬಂದ ಮೊದಲ ದೀಪೋತ್ಸವ ಇದಾಗಿರೋದ್ರಿಂದ ಈ ಬಾರಿ ವಿಜೃಂಭಣೆಯಿಂದ ದೀಪೋತ್ಸವ ಆಚರಿಸೋದಕ್ಕೆ ಆದಿತ್ಯನಾಥ್ ಸರ್ಕಾರ ತೀರ್ಮಾನ ಮಾಡಿದೆ.