ಬಿಹಾರದ ಮುಜಫರ್ಪುರದಲ್ಲಿ ಪವಿತ್ರ ಸಂಬಂಧಕ್ಕೆ ಕಳಂಕ ತರುವ ಘಟನೆ ನಡೆದಿದೆ. ವಿಕಲಾಂಗೆ ಹುಡುಗಿ ಮೇಲೆ ಅತ್ಯಾಚಾರ ನಡೆದಿದೆ. ಪೀಡಿತೆಗೆ ಕಿವಿ ಕೇಳುವುದಿಲ್ಲ. ಮಾತನಾಡಲು ಬರುವುದಿಲ್ಲ. ಆಕೆ ಚಿಕ್ಕಪ್ಪ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ.
ಸರೈಯಾ ಪೊಲೀಸ್ ಠಾಣೆ ಪ್ರದೇಶದ ಹಳ್ಳಿಯಲ್ಲಿ ಘಟನೆ ನಡೆದಿದೆ. 14 ವರ್ಷದ ಅಪ್ರಾಪ್ತ ಕಿವುಡ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ. ಆರೋಪಿ ಯುವಕ ಸಂಬಂಧದಲ್ಲಿ ಚಿಕ್ಕಪ್ಪನಾಗಬೇಕು. ಮಾಹಿತಿಯ ಪ್ರಕಾರ, ಆರೋಪಿ ಬುಧವಾರ ಸಂತ್ರಸ್ತೆಯ ಮನೆಗೆ ಬಂದು ತಾಯಿಗೆ ಚಹಾ ತಯಾರಿಸಲು ಹೇಳಿದ್ದಾನೆ. ಸಂತ್ರಸ್ತೆಯ ತಾಯಿ ಮನೆಯೊಳಗೆ ಚಹಾ ತಯಾರಿಸಲು ಹೋದಾಗ ಈ ಕೃತ್ಯವೆಸಗಿದ್ದಾನೆ.
ಆ ವೇಳೆ ಅಲ್ಲಿಗೆ ಬಂದ ತಾಯಿ ದಂಗಾಗಿದ್ದಾಳೆ. ಕಿರುಚಿಕೊಂಡು ಜನರನ್ನು ಸೇರಿಸಿದ್ದಾಳೆ. ಗ್ರಾಮಸ್ಥರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.