ಪಂಜಾಬ್ ರಾಜ್ಯದ ಅತಿ ದೊಡ್ಡ ನಗರ ಅಮೃತಸರ. ಇದು ಸಿಖ್ ಜನಾಂಗದವರ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರ. ಅಮೃತಸರ ಎಂದಾಕ್ಷಣ ನೆನಪಾಗುವುದು ಗೋಲ್ಡನ್ ಟೆಂಪಲ್.
ಈ ನಗರದಲ್ಲಿರುವ ಪವಿತ್ರ “ಅಮೃತ” ಹೆಸರಿನ ಸರೋವರದಿಂದ ಇಲ್ಲಿಗೆ ಈ ಹೆಸರು ಬಂದಿದೆ. 16ನೆಯ ಶತಮಾನದಲ್ಲಿ 4ನೆಯ ಸಿಖ್ ಗುರುಗಳಿಂದ ಈ ನಗರ ಸ್ಥಾಪಿತಗೊಂಡಿತು. ಅವರೇ ಗುರು ರಾಮದಾಸರು. ಬಳಿಕ ಅವರ ಉತ್ತರಾಧಿಕಾರಿ ಗುರು ಅರ್ಜುನ್ ದೇವಜಿ ಅವರು ವಿಸ್ತಾರವಾದ ನಗರವನ್ನು ಅಭಿವೃದ್ಧಿ ಪಡಿಸಿದರು.
ಇಲ್ಲಿ ಹಲವು ಗುರುದ್ವಾರಗಳಿವೆ. ಅದರಲ್ಲಿ ಮುಖ್ಯವಾದುದು ಹರಮಂದಿರ ಸಾಹೀಬ್. ಇದನ್ನು ಗೋಲ್ಡನ್ ಟೆಂಪಲ್ ಎಂದೇ ಕರೆಯುತ್ತಾರೆ. ಅಮೃತಸರಕ್ಕೆ ಭೇಟಿ ನೀಡಿದವರು ಇದನ್ನು ವೀಕ್ಷಿಸದೆ ಹಿಂದೆ ಬರುವುದಿಲ್ಲ. ದೇಶ – ವಿದೇಶದ ಕನಿಷ್ಠ ಒಂದು ಲಕ್ಷಕ್ಕೂ ಹೆಚ್ಚಿನ ಮಂದಿ ಇಲ್ಲಿಗೆ ನಿತ್ಯ ಆಗಮಿಸುತ್ತಾರೆ. ಇಲ್ಲಿರುವ ಇತರ ಮಂದಿರಗಳೆಂದರೆ ಬಿಬೇಕರ ಸಾಹೀಬ್, ಬಾಬಾ ಅಟಲ್ ಸಾಹೀಬ್, ರಾಮಸರ ಸಾಹೀಬ್, ಸಂತೋಬಸರ ಸಾಹೀಬ್ ಮಂದಿರ.
ಜಲಿಯನ್ ವಾಲಾಬಾಗ್ ನಲ್ಲಿ ಬಲಿಯಾದವರ ಸ್ಮಾರಕವೊಂದನ್ನು ಅಲ್ಲಿ ನಿರ್ಮಿಸಲಾಗಿದೆ. ಇಲ್ಲಿನ ಮತ್ತೊಂದು ಆಕರ್ಷಣೆ ಎಂದರೆ ವಾಘಾ ಬಾರ್ಡರ್ ನ ಸೆರೆಮೋನಿಯಲ್ ಪರೇಡ್ ಅನ್ನು ವೀಕ್ಷಿಸಲೆಂದೇ ಅನೇಕ ಪ್ರವಾಸಿಗರು ಅಗಮಿಸುತ್ತಾರೆ. ಇದಲ್ಲದೆ ಇಲ್ಲಿ ಕೈಸರ್ ಬಾಗ್, ರಾಮ ಬಾಗ್, ಖಲ್ಸಾ ಕಾಲೇಜು, ಗುರು ನಾನಕ್ ವಿಶ್ವವಿದ್ಯಾಲಯ, ತರನ್ ತರನ್ ಮತ್ತು ಪುಲ್ ಕಂಜಾರಿ ಮೊದಲಾದ ವೀಕ್ಷಣೀಯ ಸ್ಥಳಗಳಿವೆ.