ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹಾಗೂ ಎನ್.ಸಿ.ಪಿ.ಯೊಂದಿಗೆ ಕೈಜೋಡಿಸಿ ಆಡಳಿತ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ತಮ್ಮ ಹಳೆಯ ಮಿತ್ರಪಕ್ಷ ಬಿಜೆಪಿಗೆ ಶಾಕ್ ಮೇಲೆ ಶಾಕ್ ನೀಡುತ್ತಿದೆ. ಮಾಜಿ ಶಾಸಕರು ಸೇರಿದಂತೆ ಹಲವು ಬಿಜೆಪಿ ನಾಯಕರು ಪಕ್ಷ ತೊರೆದು ಶಿವಸೇನೆ ಸೇರ್ಪಡೆಗೊಳ್ಳುತ್ತಿದ್ದಾರೆ.
ಕಳೆದ ವಾರವಷ್ಟೇ ಮಾಜಿ ಶಾಸಕ ಹೇಮೇಂದ್ರ ಮೆಹತಾ, ಮುಂಬೈ ಮಹಾನಗರ ಪಾಲಿಕೆ ಸದಸ್ಯರಾದ ಸಮೀರ್ ದೇಸಾಯಿ, ಪ್ರೆಸಿಲ್ಲಾ ಕದಂ ಸೇರಿದಂತೆ ಹಲವು ಬಿಜೆಪಿ ನಾಯಕರು ಶಿವಸೇನೆ ಸೇರ್ಪಡೆಗೊಂಡಿದ್ದು, ಇದೀಗ ಮತ್ತಷ್ಟು ಬಿಜೆಪಿ ಪ್ರಮುಖರು ಶಿವಸೇನೆ ಸೇರ್ಪಡೆಗೊಳ್ಳುತ್ತಿದ್ದಾರೆ.
ವಾಹನ ಸವಾರರಿಗೆ ಬಿಗ್ ಶಾಕ್: ಸುಂಕ ಇಳಿಕೆ ಇಲ್ಲವೆಂದ ಸರ್ಕಾರ – ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ದುಬಾರಿ
ವೈಭವ್ ವಾಡಿ ನಗರ ಪಂಚಾಯಿತಿನ ಏಳು ಪಾಲಿಕೆ ಸದಸ್ಯರು ಬಿಜೆಪಿ ತೊರೆದು ಶಿವಸೇನೆ ಸೇರ್ಪಡೆಗೊಳ್ಳುತ್ತಿದ್ದು, ಬಿಜೆಪಿ ಹಿರಿಯ ಮುಖಂಡ ಹಾಗೂ ಗೃಹ ಸಚಿವ ಅಮಿತ್ ಶಾ ಮಹಾರಾಷ್ಟ್ರ ಭೇಟಿ ನೀಡಿದ 48ಗಂಟೆಯೊಳಗೆ ಇಂತಹ ಒಂದು ಬೆಳವಣಿಗೆ ನಡೆದಿರುವುದು ಗಮನಾರ್ಹ ಸಂಗತಿ. ಬಿಜೆಪಿ ರಾಜ್ಯಸಭಾ ಸದಸ್ಯ ನಾರಾಯಣ್ ರಾಣೆಯವರ ಬೆಂಬಲಿಗರ ಕಿರುಕುಳದಿಂದಾಗಿ ಪಕ್ಷ ತೊರೆಯುತ್ತಿರುವುದಾಗಿ ಈ ಪಾಲಿಕೆ ಸದಸ್ಯರುಗಳು ಹೇಳಿಕೊಂಡಿದ್ದಾರೆ.