ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗ್ತಿವೆ. ತೆಲಂಗಾಣದ ನಿಜಾಮಾಬಾದ್ ನಲ್ಲಿ ಸನ್ಯಾಸಿ ಹೆಸರಿನಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ ನಕಲಿ ಸನ್ಯಾಸಿಗೆ ಧರ್ಮದೇಟು ನೀಡಲಾಗಿದೆ. ಮಗುವಿನ ಮಾನಸಿಕ ಸ್ಥಿತಿ ಸರಿಪಡಿಸುವ ನೆಪದಲ್ಲಿ ನಕಲಿ ಸನ್ಯಾಸಿ ಹೇಯ ಕೃತ್ಯವೆಸಗಿದ್ದಾನೆ.
ಮೂರು ತಿಂಗಳಿಂದ ಅಪ್ರಾಪ್ತ ಬಾಲಕಿಯನ್ನು ಪಾಲಕರು ಸನ್ಯಾಸಿ ಬಳಿ ಕರೆದುಕೊಂಡು ಹೋಗ್ತಿದ್ದರು. ಬಾಲಕಿ ಮಾನಸಿಕ ಆರೋಗ್ಯ ಸರಿಪಡಿಸುವುದಾಗಿ ಸನ್ಯಾಸಿ ಹೇಳಿದ್ದ. ಬಾಲಕಿಗೆ ಡ್ರಗ್ಸ್ ನೀಡ್ತಿದ್ದ ಸನ್ಯಾಸಿ ಅತ್ಯಾಚಾರವೆಸಗಿದ್ದಾನೆ.
ಬಾಲಕಿಗೆ ಕೆಲ ದಿನಗಳ ಹಿಂದೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಪಾಲಕರು ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಬಾಲಕಿ ಮೇಲೆ ಅತ್ಯಾಚಾರ ನಡೆದಿರುವುದು ಬಹಿರಂಗವಾಗಿದೆ. ಬಾಲಕಿ ಗರ್ಭಿಣಿ ಎಂಬುದು ಗೊತ್ತಾಗಿದೆ. ಈ ಬಗ್ಗೆ ಪಾಲಕರು ಊರಿನ ಜನರಿಗೆ ವಿಷ್ಯ ತಿಳಿಸಿದ್ದಾರೆ. ಎಲ್ಲರೂ ಸೇರಿ ಸನ್ಯಾಸಿ ಮನೆಗೆ ನುಗ್ಗಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡ ಸನ್ಯಾಸಿಯನ್ನು ಕೊನೆಗೂ ಹಿಡಿದ ಜನರು ಹಲ್ಲೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.