ಉತ್ತರ ಪ್ರದೇಶ, ಹರಿಯಾಣದ ಬಳಿಕ ಇದೀಗ ಮಧ್ಯ ಪ್ರದೇಶ ಸರ್ಕಾರ ಕೂಡ ಅಂತರ್ ಧರ್ಮೀಯ ವಿವಾಹಗಳ ವಿರುದ್ಧ ಸಮರ ಸಾರಲು ಹೊರಟಿದೆ. ಈ ವಿಚಾರವಾಗಿ ಮಾತನಾಡಿದ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅಂತರ್ಧರ್ಮೀಯ ವಿವಾಹಗಳನ್ನ ತಡೆಯಲು ಸೂಕ್ತ ಕಾನೂನನ್ನ ಜಾರಿಗೆ ತರಲಿದ್ದೇವೆ ಅಂತಾ ಹೇಳಿದ್ರು.
ಪ್ರೀತಿಯ ಹೆಸರನ್ನ ಹೇಳಿಕೊಂಡು ಯಾರೂ ಜಿಹಾದ್ ಮಾಡುವಂತಿಲ್ಲ. ಯಾರಾದರೂ ಇಂತಹ ಕೆಲಸ ಮಾಡ್ತಾ ಇರೋದು ಕಂಡುಬಂದರೆ ಅಂತವರಿಗೆ ತಕ್ಕ ಪಾಠ ಕಲಿಸಲಾಗುತ್ತೆ. ಹಾಗೂ ಇದರ ವಿರುದ್ಧ ಕಾನೂನನ್ನೂ ಜಾರಿಗೆ ತರಲಿದ್ದೇವೆ ಅಂತಾ ಹೇಳಿದ್ರು.
ಹರಿಯಾಣ ಹಾಗೂ ಉತ್ತರ ಪ್ರದೇಶದಲ್ಲಿರುವ ಬಿಜೆಪಿ ಸರ್ಕಾರ ಕೆಲ ದಿನಗಳ ಹಿಂದಷ್ಟೇ ಅನ್ಯಧರ್ಮೀಯ ವಿವಾಹಗಳ ವಿರುದ್ಧ ಕಾನೂನು ತರೋದಾಗಿ ಹೇಳಿತ್ತು.