ಬಿಹಾರದ ವಿಧಾನಸಭೆ ಚುನಾವಣೆ ರಣಾಂಗಣ ಸಮರಕ್ಕೆ ಸಿದ್ಧವಾಗಿದೆ. ಈ ಸಂದರ್ಭದಲ್ಲಿ ರಾಷ್ಟ್ರೀಯ ಜನತಾದಳ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಇಬ್ಬರ ಹೆಸರನ್ನ ತೆಗೆದು ಹಾಕಲಾಗಿದೆ. ಅದರಲ್ಲಿ ಮೊದಲ ಹೆಸರು ಮಾಜಿ ಶಾಸಕ ರಾಜ್‌ಬಲ್ಲಭ್‌ಯಾದವ್. ಇನ್ನೊಂದು ಹೆಸರು ಅರುಣ್ ಕುಮಾರ್ ಯಾದವ್.
ಇವರ ಮೇಲೂ ಅತ್ಯಾಚಾರ ಪ್ರಕರಣದ ಆರೋಪವಿದೆ. ಕಳೆದ ಒಂದು ವರ್ಷದಿಂದ ಅರುಣ್ ಕುಮಾರ್ ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ. ರಾಜ್ ಬಲ್ಲಭ್ ಯಾದವ್ ಪತ್ನಿ ಹಾಗೂ ಅರುಣ್ ಕುಮಾರ್ ಪತ್ನಿಗೆ ಈಗ ಟಿಕೆಟ್ ನೀಡಲಾಗಿದೆ.
ರಾಜ್ ಬಲ್ಲಾಭ್ ಯಾದವ್ ಪತ್ನಿ ವಿಭಾದೇವಿಗೆ ನವಾಡದಿಂದ ಆರ್‌ಜೆಡಿ ಟಿಕೆಟ್ ನೀಡಿದೆ. ಮತ್ತೊಂದೆಡೆ ಅರುಣ್ ಕುಮಾರ್ ಯಾದವ್ ಪತ್ನಿ ಕಿರಣ್ ದೇವಿಗೆ ಸಂದೇಶ್ ಅಸೆಂಬ್ಲಿಯಿಂದ ಟಿಕೆಟ್ ನೀಡಲಾಗಿದೆ. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ರಾಜ್ ಬಲ್ಲಬ್ ಇನ್ನೂ ಜೈಲಿನಲ್ಲೇ ಇದ್ದಾರೆ.
ಈ ಹಿಂದೆ ಅಂದರೆ 2016ರಲ್ಲಿ ರಾಜ್ ಬಲ್ಲಬ್ ಯಾದವ್ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದ ಎನ್ನುವ ಆರೋಪ ಇತ್ತು. 2018ರ ಡಿಸೆಂಬರ್‌ನಲ್ಲಿ ರಾಜ್ ಬಲ್ಲಭ್ ಗೆ ಕೋರ್ಟ್ ಜೈಲು ಶಿಕ್ಷೆ ನೀಡಿತ್ತು. ನಂತ್ರ ಪಕ್ಷದಿಂದ ಅಮಾನತ್ತು ಮಾಡಲಾಗಿತ್ತು. ಉಪ ಚುನಾವಣೆಯಲ್ಲಿ ಜೆಡಿಯುನ ಕೌಶಲ್ ಯಾದವ್ ಗೆಲುವು ಸಾಧಿಸಿದ್ದರು.
ಇನ್ನು 2019ರ ಲೋಕಸಭಾ ಚುನಾವಣೆಯಲ್ಲೂ ಆರ್‌ಜೆಡಿ ವಿಭಾದೇವಿಯವರನ್ನ ನವಾಡಾ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿ ಮಾಡಿತ್ತು. ಎಲ್‌ಜಿಪಿಯ ಚಂದನ್‌ಸಿಂಗ್ ವಿರುದ್ಧ ಅವರು ಚುನಾವಣೆಯಲ್ಲಿ ಸೋತರೂ ವಿಭಾದೇವಿ 3 ಲಕ್ಷ 47 ಸಾವಿರ ಮತ ಪಡೆದಿದ್ದರು.