
ಮಧ್ಯಪ್ರದೇಶದ ಗುನಾದಲ್ಲಿ ನಡೆದ ಅಪರಾಧ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಹಿಳೆಯೊಬ್ಬಳು ಅತ್ಯಾಚಾರ ಹಾಗೂ ಹಿಂಸೆ ನೀಡ್ತಿದ್ದ ಯುವಕನ ಹತ್ಯೆ ಮಾಡಿದ್ದಾಳೆ. ಯುವಕನ ಹಿಂಸೆಗೆ ಎಷ್ಟು ಬೇಸತ್ತಿದ್ದಳೆಂದ್ರೆ 25 ಬಾರಿ ಚಾಕುವಿನಿಂದ ಇರಿದು ಯುವಕನ ಹತ್ಯೆ ಮಾಡಿದ್ದಾಳೆ.
ಆಕೆ ಅಪ್ರಾಪ್ತೆಯಾಗಿದ್ದಾಗ್ಲೇ ಆತ ಹಿಂಸೆ ನೀಡಲು ಶುರು ಮಾಡಿದ್ದನಂತೆ. 2005ರಿಂದಲೇ ದೈಹಿಕ ಹಿಂಸೆ ನಡೆಯುತ್ತಿತ್ತಂತೆ. ಆರೋಪಿ ಬ್ರಿಜ್ ಭೂಷಣ್ ಶರ್ಮಾ, ಪೀಡಿತೆ 16 ವರ್ಷದಲ್ಲಿರುವಾಗ್ಲೇ ಮೊದಲ ಬಾರಿ ಅತ್ಯಾಚಾರವೆಸಗಿದ್ದನಂತೆ. ನಂತ್ರ ಪೀಡಿತೆ ಶಿಕ್ಷಕನನ್ನು ಮದುವೆಯಾಗಿದ್ದಳಂತೆ. ಮದುವೆಯಾದ್ರೂ ಪೀಡಿತ ಆಕೆಯನ್ನು ಬಿಟ್ಟಿರಲಿಲ್ಲವಂತೆ.
ಮಹಿಳೆ ಮನೆಯಲ್ಲಿ ಒಬ್ಬಳೇ ಇರುವಾಗ ಆಕೆ ಮನೆಗೆ ನುಗ್ಗಿದ ಯುವಕ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ತಾಳ್ಮೆ ಕಳೆದುಕೊಂಡ ಮಹಿಳೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾಳೆ. ಹತ್ಯೆ ನಂತ್ರ ಪೊಲೀಸರಿಗೆ ಕರೆ ಮಾಡಿದ ಮಹಿಳೆ ಹತ್ಯೆ ಮಾಡಿರುವ ವಿಷ್ಯ ಹೇಳಿದ್ದಾಳೆ. ಅತ್ಯಾಚಾರಿಯೊಬ್ಬನ ಹತ್ಯೆ ಮಾಡಿದ್ದೇನೆಂದು ಹೇಳಿದ್ದಾಳೆ. ಸ್ಥಳಕ್ಕೆ ಬಂದ ಪೊಲೀಸರು ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಆಸ್ಪತ್ರೆಯಲ್ಲಿ ಯುವಕ ಸಾವನ್ನಪ್ಪಿದ್ದಾನೆ. ಮಹಿಳೆಯನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ.