ಇತ್ತೀಚೆಗಷ್ಟೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೆಸರಲ್ಲಿ ವಿಶ್ವದ ಅತಿ ಉದ್ದನೆಯ ಸುರಂಗ ಮಾರ್ಗವನ್ನು ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದಾರೆ. ಈ ಸುರಂಗ ಮಾರ್ಗದಲ್ಲಿ ಚಲಿಸಿದರೆ ಮನಾಲಿ ಮತ್ತು ಲೇಹ್ ನಡುವೆ 46 ಕಿ.ಮೀ. ಕಡಿಮೆ ಆಗಲಿದೆ. ಹೀಗಾಗಿ ಅನೇಕ ಪ್ರಯಾಣಿಕರಿಗೆ ಇದು ಅನುಕೂಲ ಆಗುತ್ತಿದೆ. ಈ ಸುರಂಗ ಮಾರ್ಗದಲ್ಲಿ ನಟಿ ಪ್ರಣಿತಾ ಪ್ರಯಾಣ ಮಾಡಿದ್ದಾರೆ. ಅಲ್ಲಿನ ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಹೌದು, ಸ್ಯಾಂಡಲ್ ವುಡ್ ನಟಿ ಪ್ರಣೀತಾ ಸುಭಾಷ್ ಸದ್ಯ ಬಾಲಿವುಡ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹಿಂದಿಯ ಹಂಗಮಾ-2 ಸಿನಿಮಾದಲ್ಲಿ ನಟಿಸುತ್ತಿರುವ ಹಿನ್ನೆಲೆಯಲ್ಲಿ ಚಿತ್ರೀಕರಣಕ್ಕೆಂದು ಮನಾಲಿಗೆ ಪ್ರಯಾಣ ಬೆಳೆಸಿದ್ದಾರೆ. ಈ ವೇಳೆ ನಟಿ ಪ್ರಣೀತಾ ಅಟಲ್ ಟನಲ್ ಬಳಿ ಸಾಕಷ್ಟು ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದೀಗ ಈ ಫೋಟೋಗಳು ವೈರಲ್ ಆಗಿವೆ.
ಹಾಗೆಯೇ ಈ ಟನಲ್ನಲ್ಲಿ ಪ್ರಯಾಣ ಬೆಳೆಸಿದ್ದು ಖುಷಿಯಾಗಿದೆ. ಈ ಮಾರ್ಗದಲ್ಲಿ ಪ್ರಯಾಣ ಬೆಳೆಸಿದರೆ ಸಾಕಷ್ಟು ಸಮಯ ಉಳಿಯುತ್ತಿದೆ ಎಂದು ಹೇಳಿದ್ದಾರೆ. ಈ ಉದ್ದದ ಟನಲ್ ಇದೀಗ ಪ್ರವಾಸಿ ತಾಣವಾಗಿದೆ. ಅನೇಕರು ಇಲ್ಲಿಗೆ ಬಂದು ಫೋಟೋ ತಗೆಸಿಕೊಳ್ಳುತ್ತಿದ್ದಾರೆ.