ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದ ಮೂಲಕ ದೇಶದ ಜನರನ್ನುದ್ದೇಶಿಸಿ ಮಾತನಾಡಿದ್ದಾರೆ. ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಸಂಬಂಧಿಸಿದ ಈ ವಿಡಿಯೋವನ್ನು ಭಾರತೀಯ ಜನತಾ ಪಾರ್ಟಿ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದೆ. ಇದುವರೆಗೆ 11 ಲಕ್ಷಕ್ಕೂ ಹೆಚ್ಚು ಬಾರಿ ಈ ವಿಡಿಯೋ ವೀಕ್ಷಣೆ ಮಾಡಲಾಗಿದೆ. ಆಶ್ಚರ್ಯವೆಂದ್ರೆ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ 36 ಸಾವಿರ ಲೈಕ್ ಬಂದ್ರೆ 3 ಲಕ್ಷಕ್ಕೂ ಹೆಚ್ಚು ಡಿಸ್ ಲೈಕ್ ಬಂದಿದೆ.
ಪಿಎಂ ನರೇಂದ್ರ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಮೆಂಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀಟ್ ಮತ್ತು ಜೆಇಇ ಬಗ್ಗೆ ಕೆಲವರು ಪ್ರಶ್ನೆ ಮಾಡಿದ್ರೆ ಮತ್ತೆ ಕೆಲವರು ನಿರುದ್ಯೋಗದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಮೋದಿಯವರು ನೀಟ್, ಜೆಇಇ ಬಗ್ಗೆ ಮಾತನಾಡಬೇಕಿತ್ತು. ಆದ್ರೆ ಆಟಿಕೆ ಬಗ್ಗೆ ಮಾತನಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನ್ ಕಿ ಬಾತ್ ನಲ್ಲಿ ಮೋದಿ ಲೋಕಲ್ ಆಗುವ ಬಗ್ಗೆ ಹೇಳಿದ್ದರು. ಸ್ಥಳೀಯ ಆಟಿಕೆಗಳನ್ನು ತಯಾರಿಸುವಂತೆ ಯುವ ಜನತೆಗೆ ಕರೆ ನೀಡಿದ್ದರು.