ವಾಟ್ಸಾಪ್ ನಲ್ಲಿ ಅಪರಿಚಿತರಿಂದ ವಿಡಿಯೋ ಕರೆ, ಆಡಿಯೋ ಕರೆಗಳು ಬರುತ್ತವೆ. ಇದು ಸುರಕ್ಷಿತವಲ್ಲ. ವಾಟ್ಸಾಪ್ ಪ್ರೊಫೈಲ್ ಫೋಟೋಗಳನ್ನು ಫೋಟೋಶಾಪ್ ನಲ್ಲಿ ಬದಲಿಸಿ ನಂತ್ರ ಬ್ಲಾಕ್ಮೇಲ್ ಮಾಡುವವರಿದ್ದಾರೆ. ಅನೇಕರು ಇಂಥವರಿಂದ ತೊಂದರೆ ಅನುಭವಿಸುತ್ತಾರೆ. ಹಾಗಾಗಿ ವಾಟ್ಸಾಪ್ ಸುರಕ್ಷತೆಗೆ ಮಹತ್ವ ನೀಡಬೇಕು. ವಾಟ್ಸಾಪ್ ಸೆಟ್ಟಿಂಗ್ ನಲ್ಲಿ ನೀವು ಸುರಕ್ಷತೆ ಪಡೆಯಬಹುದು.
ಯಾವುದೇ ಅಪರಿಚಿತ ವ್ಯಕ್ತಿಯ ವಿಡಿಯೋ ಕಾಲ್, ಆಡಿಯೋ ಕಾಲ್ ಸ್ವೀಕರಿಸಬೇಡಿ. ಅವ್ರು ನಿಮಗೆ ಪರಿಚಿತರೆ ಎಂಬುದನ್ನು ಮೊದಲು ಪರಿಶೀಲಿಸಿ. ಇಲ್ಲವಾದ್ರೆ ನೀವು ಅವ್ರ ನಂಬರ್ ಬ್ಲಾಕ್ ಮಾಡಿ.
ಒಂದು ವೇಳೆ ಅಪರಿಚಿತರ ವಿಡಿಯೋ ಕಾಲ್ ರಿಸೀವ್ ಮಾಡ್ತಿರೆಂದಾದಲ್ಲಿ ಸೆಲ್ಫಿ ಕ್ಯಾಮರಾದ ಮೇಲೆ ಕೈ ಇಟ್ಟು ರಿಸೀವ್ ಮಾಡಿ. ಯಾವುದೇ ಕಾರಣಕ್ಕೂ ಅವರಿಗೆ ನಿಮ್ಮ ಮುಖ ಕಾಣಿಸದಂತೆ ನೋಡಿಕೊಳ್ಳಿ.
ಸ್ಕ್ಯಾಮರ್ಗಳು ಮತ್ತು ಕಿರುಕುಳ ನೀಡುವವರ ಸಂಖ್ಯೆಗಳು ಭಿನ್ನವಾಗಿರುತ್ತವೆ +91 ಬದಲು ಬೇರೆ ಸಂಖ್ಯೆಯಿಂದ ಬಂದಿರುತ್ತದೆ. ಅಂತ ಕರೆಗಳು ಬಂದ್ರೆ ಸ್ವೀಕರಿಸಬೇಡಿ.
ವಾಟ್ಸಾಪ್ ಫೋಟೋವನ್ನು ನಿಮ್ಮ ಸ್ನೇಹಿತರು ಮಾತ್ರ ನೋಡಬಹುದು ಎಂಬ ಆಯ್ಕೆ ಆಯ್ದುಕೊಳ್ಳಿ. ಸಾರ್ವಜನಿಕ ಮಾಡಬೇಡಿ. ನೀವು ಕ್ಯಾಬ್, ಆಟೋ ಚಾಲಕರು ಸೇರಿದಂತೆ ಕೆಲವರ ನಂಬರ್ ಬಳಸುತ್ತೀರಿ. ಅವರಿಗೆ ನಿಮ್ಮ ವಾಟ್ಸಾಪ್ ಫೋಟೋ ಕಾಣಬೇಕಾಗಿಲ್ಲ.
ಗೌಪ್ಯತೆ ಸೆಟ್ಟಿಂಗ್ ಬದಲಿಸಿ. ಯಾವುದೇ ಗ್ರೂಪ್ ಗೆ ನಿಮ್ಮನ್ನು ಸೇರಿಸುವ ಅನುಮತಿ ನೀಡಬೇಡಿ. ನಿಮ್ಮ ಸಂಪರ್ಕದಲ್ಲಿರುವವರಿಗೆ ಮಾತ್ರ ಅನುಮತಿ ನೀಡಿ.