ಕೊರೊನಾ ಸದ್ಯ ವಿಶ್ವವನ್ನು ಕಾಡ್ತಿದೆ. ಕೊರೊನಾ ಹೆಸರು ಕೇಳ್ತಿದ್ದಂತೆ ಜನರು ಕಂಗಾಲಾಗ್ತಿದ್ದಾರೆ. ಕೊರೊನಾ ಪಾಸಿಟಿವ್ ಬಂದಿದೆ ಎಂಬುದು ತಿಳಿಯುತ್ತಿದ್ದಂತೆ ಕೆಲವರಿಗೆ ಹೃದಯಾಘಾತವಾಗಿದೆ. ಕೊರೊನಾ ಪಾಸಿಟಿವ್ ಬರ್ತಿದ್ದಂತೆ ಕ್ವಾರಂಟೈನ್ ಸೆಂಟರ್ ಗೆ ಕಳುಹಿಸಲಾಗುತ್ತದೆ. ಅಲ್ಲಿಗೆ ಹೋಗುವ ಮೊದಲು ಈ ಕೆಲಸ ಮಾಡಿ.
ಮೊದಲು ನಿಮ್ಮ ಬಳಿಯಿರುವ ವಿಮೆಯನ್ನು ಚೆಕ್ ಮಾಡಿ. ನಿಮ್ಮ ಬಳಿ ಕಡಿಮೆ ಎಂದ್ರೂ 7 ದಿನಗಳ ಕಾಲ ಇರಲು ಹಣ ಬೇಕು. ಒಂದು ಒಳ್ಳೆ ಆಸ್ಪತ್ರೆಗೆ 3.5 ಲಕ್ಷದವರೆಗೆ ಖರ್ಚು ಬರುತ್ತದೆ. ಹಾಗಾಗಿ ಮನೆ ಹಾಗೂ ಆಸ್ಪತ್ರೆ ಖರ್ಚಿಗೆ ಹಣದ ಬಂದೋಬಸ್ತ್ ಮಾಡಬೇಕು.
ಸರ್ಕಾರ ಹಾಗೂ ಖಾಸಗಿ ಆಸ್ಪತ್ರೆ ಮಧ್ಯೆ ಸಾಕಷ್ಟು ವ್ಯತ್ಯಾಸವಿದೆ. ಎರಡಕ್ಕೂ ನೀವು ಹೊಂದಿಕೊಳ್ಳಲು ಸಿದ್ಧರಾಗಬೇಕು. ಒಂದು ವೇಳೆ ಉತ್ತಮ ವ್ಯವಸ್ಥೆ ಬೇಕೆಂದ್ರೆ ನೀವು ಮೊದಲು ಈ ಬಗ್ಗೆ ಅಧಿಕಾರಿಗಳಿಗೆ ವಿನಂತಿ ಮಾಡಿ.
ಆಸ್ಪತ್ರೆಗೆ ದಾಖಲಾಗುವ ಮೊದಲು ನೀವು ಪ್ರಮುಖ ದಾಖಲೆಗಳನ್ನು ಇಟ್ಟುಕೊಳ್ಳಿ. ಕಚೇರಿ ಐಡಿ, ಆಧಾರ್, ಕೋವಿಡ್ -19 ರಿಪೋರ್ಟ್ ನಿಮ್ಮ ಬಳಿ ಇಟ್ಟುಕೊಳ್ಳಿ.
ನೀರನ್ನು ಬಿಸಿಯಾಗಿಟ್ಟುಕೊಳ್ಳಲು ಬಾಟಲ್, ಚವನ್ ಪ್ರಶ್, ಬಿಸ್ಕಿಟ್, ಸುಮಾರು 5 ಜೊತೆ ಬಟ್ಟೆ, ಟೂತ್ ಪೇಸ್ಟ್, ಬ್ರಶ್, ಸೋಪ್ ಸೇರಿದಂತೆ ಸ್ವಚ್ಛತೆಯೆ ಎಲ್ಲ ವಸ್ತುಗಳು ಬ್ಯಾಗ್ ನಲ್ಲಿರಲಿ. 7 ದಿನಗಳವರೆಗೆ ಹಾಳಾಗದ ಹಣ್ಣುಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳಬಹುದು. ಚಾಕು, ಟಿಶ್ಯು, ಉಪ್ಪು, ಸಕ್ಕರೆ, ಟೀ ಬ್ಯಾಗ್, ಮಗ್, ಪೇಪರ್ ಪ್ಲೇಟ್, ಸ್ಪೂನ್ ನಿಮ್ಮ ಬಳಿ ಇರಲಿ.
ಆಸ್ಪತ್ರೆಯಲ್ಲಿ ಸುಮ್ಮನೆ ಸಮಯ ಕಳೆಯುವುದು ಕಷ್ಟ. ಹಾಗಾಗಿ ಆಸ್ಪತ್ರೆಯಲ್ಲಿ ಸಮಯ ಕಳೆಯಲು ನಿಮಗಿಷ್ಟವಾದ ಪುಸ್ತಕ ಇಟ್ಟುಕೊಂಡು ಓದಬಹುದು.
ಮೊಬೈಲ್,ನೆಟ್ ಸೌಲಭ್ಯವಿದ್ದಲ್ಲಿ ನಿಮಗಿಷ್ಟವಾದ,ಮನಸ್ಸಿಗೆ ಹಿತವೆನಿಸುವ ಸಿನಿಮಾ,ವೆಬ್ ಸರಣಿಯನ್ನು ವೀಕ್ಷಿಸಿ.
ಅವಶ್ಯಕ ಮೇಲ್ ಕಳುಹಿಸುವುದ್ರಿಂದ ಹಿಡಿದು ಕಚೇರಿ ಕೆಲಸ, ಸಿನಿಮಾ ವೀಕ್ಷಣೆ ಸೇರಿದಂತೆ ಅನೇಕ ಕೆಲಸಕ್ಕೆ ಲ್ಯಾಪ್ ಟಾಪ್ ಅವಶ್ಯಕ. ಹಾಗಾಗಿ ಕ್ವಾರಂಟೈನ್, ಆಸ್ಪತ್ರೆಗೆ ಹೋಗುವ ಮೊದಲು ಲ್ಯಾಪ್ ಟಾಪ್ ಇಟ್ಟುಕೊಳ್ಳಿ.
ಕ್ವಾರಂಟೈನ್ ಸೆಂಟರ್ ನಲ್ಲಿದ್ದರೂ ಕುಟುಂಬಸ್ಥರ ಆರೋಗ್ಯದ ಬಗ್ಗೆ ವಿಚಾರಿಸಬೇಕು. ಅವ್ರ ಜೊತೆ ಆಗಾಗ ಮಾತನಾಡಬೇಕು. ಕುಟುಂಬಸ್ಥರು ಆತಂಕದಲ್ಲಿರುವ ಕಾರಣ ಅವ್ರಿಗೆ ಧೈರ್ಯ ತುಂಬುವ ಹಾಗೂ ನೀವು ಧೈರ್ಯ ಪಡೆಯುವ ಕೆಲಸ ಇದ್ರಿಂದ ಆಗಬೇಕು.