ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಆದ್ರೆ ಕೊರೊನಾ ಬಗ್ಗೆ ಮೊದಲಿದ್ದ ಭಯ ಜನರಿಗೆ ಈಗಿಲ್ಲ. ಇಷ್ಟು ದಿನ ಮನೆಯಲ್ಲಿದ್ದವರು ಈಗ ನಿಧಾನವಾಗಿ ಹೊರಗೆ ಬರ್ತಿದ್ದಾರೆ. ಕೊರೊನಾ ಭಯವಿಲ್ಲದೆ ಓಡಾಡ್ತಿದ್ದಾರೆ. ಇದಕ್ಕೆ ಕಾರಣವೇನು ಎಂಬುದನ್ನು ತಜ್ಞರು ಹೇಳಿದ್ದಾರೆ.
ದೆಹಲಿಯಲ್ಲಿ ಕೊರೊನಾ ಪರೀಕ್ಷೆಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಇದ್ರಿಂದಾಗಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾದಂತೆ ಕಾಣ್ತಿದೆ. ವಾಸ್ತವವಾಗಿ ಹಾಗಿಲ್ಲ. ವಾತಾವರಣ ಹಾಗೂ ಭಾರೀ ಮಳೆಯಿಂದಾಗಿ ಜನರು ಪರೀಕ್ಷೆ ಮಾಡಿಸಿಕೊಳ್ತಿಲ್ಲ. ಹಾಗಾಗಿ ಕೊರೊನಾ ಸೋಂಕಿನ ಸಂಖ್ಯೆ ಕಡಿಮೆಯಾದಂತೆ ಭಾಸವಾಗ್ತಿದೆ.
ರಜಾ ದಿನಗಳಲ್ಲೂ ಜನರು ಪರೀಕ್ಷೆಗೆ ಬರ್ತಿಲ್ಲ. ಇದು ತಪ್ಪು. ಲಕ್ಷಣ ಕಾಣಿಸಿಕೊಳ್ತಿದ್ದಂತೆ ಜನರು ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದೆಂದು ವೈದ್ಯರು ಹೇಳಿದ್ದಾರೆ. ಅಂಕಿ-ಅಂಶಗಳ ಪ್ರಕಾರ, ಜುಲೈಗೆ ಹೋಲಿಸಿದರೆ ಆಗಸ್ಟ್ ನಲ್ಲಿ ದೆಹಲಿಯಲ್ಲಿ ಪರೀಕ್ಷೆಯ ಸಂಖ್ಯೆ ಕಡಿಮೆಯಾಗಿದೆ. ಆಗಸ್ಟ್ 1 ರಿಂದ ಆಗಸ್ಟ್ 15 ರವರೆಗೆ ದೆಹಲಿಯಲ್ಲಿ 2.58 ಲಕ್ಷಕ್ಕೂ ಹೆಚ್ಚು ಮಾದರಿಗಳ ಪರೀಕ್ಷೆ ನಡೆದಿದೆ. ಜುಲೈನಲ್ಲಿ ಇದು 3.13 ಲಕ್ಷಕ್ಕಿಂತ ಹೆಚ್ಚಿತ್ತು. ಸಂಖ್ಯೆ ಕಡಿಮೆಯಾಗ್ತಿದ್ದಂತೆ ಜನರು ಕೊರೊನಾ ಕಡಿಮೆಯಾಗಿದೆ ಎಂದು ಭಾವಿಸಿ ಭಯ ಬಿಟ್ಟು ಹೊರಗೆ ಬರ್ತಿದ್ದಾರೆ.