ದೇಶದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರಿಸುತ್ತಿದೆ. ಈಗಾಗಲೇ ಲಸಿಕೆ ಅಭಿಯಾನ ನಡೆಯುತ್ತಿದ್ದು, ಲಸಿಕೆ ಹಾಕಿಸಿಕೊಂಡವರಿಗೂ ಕೊರೊನಾ ಸೋಂಕು ತಗುಲಿದೆ. ಕೆಲವರು ಸೋಂಕಿತರಾಗಿ ಬಳಿಕ ಗುಣಮುಖರಾಗಿದ್ದಾರೆ. ಕೊರೊನಾ ಸೋಂಕು ತಗುಲಿ ಗುಣಮುಖರಾದರೂ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಬೇಕಾದ ಕನಿಷ್ಠ ಜೀವನ ಕ್ರಮ ಅನುಸರಿಸುವುದು ಅನಿವಾರ್ಯವಾಗಿದೆ.
ಸೋಂಕಿನಿಂದ ಗುಣಮುಖರಾದವರು ಆರೋಗ್ಯಯುತ ಆಹಾರ ಸೇವಿಸುವುದರೊಂದಿಗೆ, ಯೋಗ, ಲಘು ವ್ಯಾಯಾಮ ಮುಂದುವರಿಸಬೇಕು. ಅಷ್ಟೇ ಅಲ್ಲದೆ, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಅಗತ್ಯ ಮನೆಮದ್ದುಗಳನ್ನೂ ಮುಂದುವರೆಸಬೇಕು.
ಮಾಸ್ಕ್ ಧರಿಸುವುದು, ಶರೀರವನ್ನು ಶುಚಿಯಾಗಿ ಇಟ್ಟುಕೊಳ್ಳುವುದು, ದೈಹಿಕ ಅಂತರ ಕಾಪಾಡಿಕೊಳ್ಳುವುದು, ಅಗತ್ಯವಿರುವಷ್ಟು ನಿಯಮಿತವಾಗಿ ಬಿಸಿ ನೀರು ಕುಡಿಯುವುದು, ಹಾಲಿಗೆ ಅರಿಷಿನ ಪುಡಿ ಹಾಕಿ ಬಿಸಿ ಮಾಡಿಕೊಂಡು ಕುಡಿಯುವುದು, ಕಷಾಯ ಬಳಸುವುದು, ಚ್ಯವನಪ್ರಾಶ ಸೇವಿಸುವುದು, ಯೋಗ, ಲಘು ವ್ಯಾಯಾಮ, ಧ್ಯಾನ, ಪ್ರಾಣಾಯಾಮ, ವಾಯುವಿಹಾರ, ನಡಿಗೆ ಇತ್ಯಾದಿಗಳನ್ನು ಜೀವನ ಪದ್ಧತಿಯಲ್ಲಿ ನಿತ್ಯವೂ ಅಳವಡಿಸಿಕೊಳ್ಳಬೇಕು. ಸಾಧ್ಯವಾದಷ್ಟು ಮನೆಯಲ್ಲೇ ಇದ್ದು ಕೆಲಸ ಮಾಡಬೇಕು.