ದೇಶದಲ್ಲಿ ಈಗ ಕೊರೊನಾ ಎರಡನೇ ಅಲೆ ಕಾಲಿಟ್ಟಿದೆ. ಇದರ ಆರ್ಭಟ ಬಹಳ ಜೋರಾಗಿದ್ದು, ದೇಶದಾದ್ಯಂತ ಪ್ರತಿ ನಿತ್ಯ ಲಕ್ಷಕ್ಕೂ ಅಧಿಕ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ
ವಾಸನೆ ಸಾಮರ್ಥ್ಯ ಕಳೆದುಕೊಳ್ಳುವುದು ಹಾಗೂ ನಾಲಗೆ ರುಚಿ ಗ್ರಹಿಕೆ ಮಾಡೋದನ್ನ ನಿಲ್ಲಿಸೋದು ಇವೆಲ್ಲ ಕೊರೊನಾ ಲಕ್ಷಣಗಳು ಎಂದು ಹೇಳಲಾಗುತ್ತೆ.
ಇನ್ನು ಗಂಭೀರ ಪ್ರಕರಣಗಳಲ್ಲಿ ಶ್ವಾಸಕೋಶದ ಮೇಲೆ ವೈರಸ್ ವಿಪರೀತ ಮಟ್ಟದಲ್ಲಿ ದಾಳಿ ಮಾಡುತ್ತೆ. ಆದರೆ ಕಡಿಮೆ ಗುಣ ಲಕ್ಷಣ ಹೊಂದಿರುವ ಬಹುತೇಕ ಮಂದಿ ಈ ವಾಸನೆ ಹಾಗೂ ರುಚಿಯ ಸಮಸ್ಯೆಯಿಂದ ಬಳಲುತ್ತಿರ್ತಾರೆ.
ಕೊರೊನಾ ಮೊದಲನೇ ಅಲೆ ದೇಶಕ್ಕೆ ಬಂದು ಅಪ್ಪಳಿಸಿದ ಸಂದರ್ಭದಲ್ಲಿ ಭಾರತೀಯ ಆರೋಗ್ಯ ತಜ್ಞರು ಕೊರೊನಾ ಗುಣಲಕ್ಷಣಗಳ ಮೇಲೆ ಅಧ್ಯಯನವೊಂದನ್ನ ಮಾಡಿದ್ದರು.
ಇದರನ್ವಯ ಗಂಭೀರ ಸ್ಥಿತಿಗೆ ತಲುಪಿ ಐಸಿಯುಗೆ ಹೋಗುವ ಸೋಂಕಿತರಲ್ಲಿ ಈ ವಾಸನೆ ಹಾಗೂ ರುಚಿ ಕಳೆದುಕೊಳ್ಳುವ ಲಕ್ಷಣ ಹೆಚ್ಚಾಗಿ ಕಂಡುಬರಲ್ಲ ಎಂದು ಹೇಳಲಾಗಿದೆ.
ರುಚಿ ಹಾಗೂ ವಾಸನೆ ಕಳೆದುಕೊಳ್ಳೋದು ನಿಜಕ್ಕೂ ಒಳ್ಳೆಯ ಲಕ್ಷಣ ಎನ್ನುವ ವೈದ್ಯರು, ಶೇಕಡಾ 50 ಕ್ಕೂ ಅಧಿಕ ಮಂದಿ ಸೋಂಕಿತರು ರುಚಿ ಹಾಗೂ ವಾಸನೆ ಕಳೆದುಕೊಳ್ತಾರೆ. ನಿಜಕ್ಕೂ ಇದೊಂದು ಒಳ್ಳೆಯ ಗುಣಲಕ್ಷಣ. ಇಂತವರು ಗಂಭೀರವಾಗಿ ವೈರಸ್ ದಾಳಿಗೆ ತುತ್ತಾಗಿರೋದಿಲ್ಲ ಎಂದು ಹೇಳಿದ್ದಾರೆ.