
ದುಬೈ: ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಜಯಗಳಿಸಿದ ಭಾರತ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
252 ಗೆಲುವಿನ ಗುರಿ ಬೆನ್ನತ್ತಿದ ಭಾರತ 49 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 254 ರನ್ ಗಳಿಸಿದೆ. ಭಾರತ ಪರವಾಗಿ ರೋಹಿತ್ ಶರ್ಮಾ 76, ಶುಭಮನ್ ಗಿಲ್ 31, ವಿರಾಟ್ ಕೊಹ್ಲಿ 1, ಶ್ರೇಯಸ್ ಅಯ್ಯರ್ 48, ಅಕ್ಷರ್ ಪಟೇಲ್ 29, ಕೆ.ಎಲ್. ರಾಹುಲ್ ಅಜೇಯ 34, ಹಾರ್ದಿಕ್ ಪಾಂಡ್ಯ 18, ರವೀಂದ್ರ ಜಡೇಜ ಅಜೇಯ 9 ರನ್ ಗಳಿಸಿದರು.
ನ್ಯೂಜಿಲೆಂಡ್ ಪರವಾಗಿ ಮಿಚೆಲ್ ಸ್ಯಾಂಟ್ನರ್ 2, ಮಿಚೆಲ್ ಬ್ರೇಸ್ ವೆಲ್ 2, ರಾಚಿನ್ ರವೀಂದ್ರ 1, ಕೈಲ್ ಜೇಮಿಸನ್ 1 ವಿಕೆಟ್ ಪಡೆದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 251 ರನ್ ಗಳಿಸಿದೆ. ಭಾರತದ ಗೆಲುವಿಗೆ 252 ರನ್ ಗುರಿ ನೀಡಿತು. ವಿಲ್ ಯಂಗ್ 15, ರಾಚಿನ್ ರವೀಂದ್ರ 37, ಕೇನ್ ವಿಲಿಯಮ್ಸನ್ 11, ಡೇರ್ಲ್ ಮಿಚೆಲ್ 63, ಟಾಮ್ ಲ್ಯಾಥಮ್ 14, ಗ್ಲೆನ್ ಫಿಲಿಪ್ಸ್ 34, ಮಿಚೆಲ್ ಬ್ರೇಸ್ ವೆಲ್ ಅಜೇಯ 53, ಮಿಚೆಲ್ ಸ್ಯಾಟ್ನರ್ 8, ನೇಥನ್ ಸ್ಮಿತ್ ಅಜೇಯ 0 ರನ್ ಗಳಿಸಿದ್ದಾರೆ.
ಭಾರತದ ಪರವಾಗಿ ಕುಲದೀಪ್ ಯಾದವ್ 2, ವರುಣ್ ಚಕ್ರವರ್ತಿ 2, ಮಹಮ್ಮದ್ ಶಮಿ, ರವೀಂದ್ರ ಜಡೇಜ ತಲಾ ಒಂದು ವಿಕೆಟ್ ಪಡೆದರು.
India is the Champion now, clinches #ChampionsTrophy2025; beats New Zealand by 4 wickets at Dubai International Cricket Stadium. pic.twitter.com/duPPbntMXJ
— ANI (@ANI) March 9, 2025
India lifts #ChampionsTrophy2025; beats New Zealand in a nail-biting final at Dubai International Cricket Stadium
(Pics – ANI Picture Service) pic.twitter.com/Y6ASam4dz1
— ANI (@ANI) March 9, 2025
India remains unbeaten in second consecutive ICC tournament; lifts #ChampionsTrophy2025 with full dominance
India beat New Zealand to lift its third #ICCChampionsTrophy at Dubai International Cricket Stadium
(Pics – ANI Picture Service) pic.twitter.com/MKcfTRBTnJ
— ANI (@ANI) March 9, 2025